ವಿಜಯಪುರ:ನಿನ್ನೆ ರಾತ್ರಿ ಜಿಲ್ಲೆಯ ಕೊಲ್ಹಾರ ತಾಲೂಕಿನ ಕೆಲ ಗ್ರಾಮಗಳ ಜನರಿಗೆ ಭೂಕಂಪನವಾದ ಅನುಭವ ಆಗಿದೆ ಎಂದು ತಿಳಿದು ಬಂದಿದೆ. ಆದರೆ ಆಲಮಟ್ಟಿ ಭೂಕಂಪನ ಅಳತೆ ಮಾಪನ ಕೇಂದ್ರದಲ್ಲಿರುವ ರಿಕ್ಟರ್ ಮಾಪಕದಲ್ಲಿ ಮಾಹಿತಿ ದಾಖಲಾಗಿಲ್ಲ ಎಂದು ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ ಸ್ಪಷ್ಟನೆ ನೀಡಿದ್ದಾರೆ.
ಕೆಲ ಗ್ರಾಮಗಳಲ್ಲಿ ಭೂಕಂಪನದ ಅನುಭವ ಆಗಿದೆಯಂತೆ: ವಿಜಯಪುರ ಡಿಸಿ ಸ್ಪಷ್ಟನೆ - DC Sunila Kumara clarifies about earthquake experience in Vijayapur district
ವಿಜಯಪುರ ಜಿಲ್ಲೆಯ ಕೆಲ ಗ್ರಾಮದಲ್ಲಿ ಭೂಕಂಪನವಾದ ಅನುಭವವಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಆದರೆ, ಆಲಮಟ್ಟಿ ಭೂಕಂಪನ ಅಳತೆ ಮಾಪನ ಕೇಂದ್ರದಲ್ಲಿನ ರಿಕ್ಟರ್ ಮಾಪಕದಲ್ಲಿ ಮಾಹಿತಿ ದಾಖಲಾಗಿಲ್ಲ ಎಂದು ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ ಸ್ಪಷ್ಟನೆ ನೀಡಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆಯೂ ಜಿಲ್ಲೆಯ ಕೆಲ ಗ್ರಾಮದಲ್ಲಿ ಭೂಕಂಪವಾದ ಅನುಭವವಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದರು. ಈಗ ಮತ್ತೊಮ್ಮೆ ಭೂಕಂಪನದ ಅನುಭವವಾಗಿದೆ ಎಂದು ಗ್ರಾಮದ ಜನರು ಮಾಹಿತಿ ನೀಡಿದ್ದಾರೆ. ಬೆಂಗಳೂರಿನ ಭೂಕಂಪನ ಅಳತೆ ಮಾಪನ ಕೇಂದ್ರಕ್ಕೆ ಮಾಹಿತಿ ನೀಡಲಾಗಿದೆ. ಒಮ್ಮೆ ಆಲಮಟ್ಟಿ ಭೂ ಮಾಪನ ಕೇಂದ್ರಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಬೇಕು. ಸೂಕ್ತ ತನಿಖೆ ನಡೆಸಿ ಗ್ರಾಮಸ್ಥರ ಭಯ ನಿವಾರಿಸಬೇಕು ಎಂದು ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಮಳೆಗಾಲದ ವೇಳೆ ಇಂತಹ ಅನುಭವವಾಗುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಅದು ವಿಜಯಪುರದಲ್ಲಿ ನಡೆದ ಭೂಕಂಪನ ಅನುಭವಕ್ಕೆ ಪೂರಕವಾಗಿದೆಯೇ ಎನ್ನುವ ಕುರಿತು ಗ್ರಾಮಸ್ಥರನ್ನು ಭೇಟಿ ಮಾಡಿ ಮಾಹಿತಿ ಕಲೆ ಹಾಕುವಂತೆ ಉಪವಿಭಾಗಾಧಿಕಾರಿಗಳನ್ನು ಮಸೂತಿ ಗ್ರಾಮಕ್ಕೆ ಕಳುಹಿಸಲಾಗಿದೆ. ಅವರು ನೀಡುವ ವರದಿ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.