ವಿಜಯಪುರ: ಎಸ್ಆರ್ಎಫ್ಐಡಿ ಫೀಡಿಂಗ್ ಮಾಡುವ ಮೂಲಕ ಸಾರ್ವಜನಿಕರು ತಮ್ಮ ಕೋವಿಡ್ ಫಲಿತಾಂಶ ಪಡೆಯಲು ಪೋರ್ಟಲ್ https://www.covidwar.karnataka.gov.in/service1 ಸಹಕಾರಿಯಾಗಲಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.
ತಮ್ಮ ಕೋವಿಡ್ ಫಲಿತಾಂಶ ಪಡೆಯಲು ಈ ಪೋರ್ಟಲ್ ನೋಡಿ: ಜಿಲ್ಲಾಧಿಕಾರಿ ಮಾಹಿತಿ - Corona in Vijayapura
ವಿಜಯಪುರ ಜಿಲ್ಲೆಯ ಜನರಿಗೆ ಕೊರೊನಾ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್, ಕೋವಿಡ್ ಪಾಸಿಟಿವ್ ಬಂದ ತಕ್ಷಣ ಯಾರೂ ಆತಂಕಪಡಬೇಡಿ ಎಂದಿದ್ದಾರೆ.

ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್
ನಗರದಲ್ಲಿ ಈ ಕುರಿತು ಮಾಹಿತಿ ನೀಡಿರುವ ಅವರು, ಕೋವಿಡ್ ಪಾಸಿಟಿವ್ ಬಂದ ತಕ್ಷಣ ಯಾರೂ ಆತಂಕ ಪಡಬೇಕಿಲ್ಲ. ಶಾಂತಚಿತ್ತರಾಗಿ ಮನೆಯ ಐಸೊಲೇಶನ್ನಲ್ಲಿಯೇ ಚಿಕಿತ್ಸೆ ಪಡೆಯಿರಿ.
ರಾಜ್ಯ ಸರ್ಕಾರ ತಮ್ಮೊಂದಿಗೆ ಮೊಬೈಲ್ ಮೂಲಕ ನೇರ ಸಂಪರ್ಕ ಸಾಧಿಸಲಿದ್ದು, ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದರೆ ತುರ್ತು ಸಂದರ್ಭದಲ್ಲಿ ತಕ್ಷಣ 108ಗೆ ಕರೆ ಮಾಡಬೇಕು. ರಾಜ್ಯ ವಾರ್ ರೂಮ್ಗೂ, ವೈದ್ಯಕೀಯ ನೆರವು ಆಪ್ತಮಿತ್ರ ಸಹಾಯವಾಣಿಗೂ (14410) ಕರೆ ಮಾಡಹುದು ಎಂದಿದ್ದಾರೆ.