ಕರ್ನಾಟಕ

karnataka

ETV Bharat / state

ವೇತನದ ಜೊತೆಗೆ ಸೇವಾ ಭದ್ರತೆ ಕಲ್ಪಿಸಿ: ಡಿ ದರ್ಜೆ ನೌಕರರ ಒತ್ತಾಯ - ಮುದ್ದೇಬಿಹಾಳ ಇತ್ತೀಚಿನ ಸುದ್ದಿ

ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಡಿ ದರ್ಜೆ ನೌಕರರಿಗೆ ಸೇವಾ ಭದ್ರತೆ ಮತ್ತು ವೇತನ ಕಲ್ಪಿಸುವಂತೆ ನೌಕರರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

muddebihala
ಡಿ-ದರ್ಜೆ ನೌಕರರ ಒತ್ತಾಯ

By

Published : May 13, 2021, 12:57 PM IST

ಮುದ್ದೇಬಿಹಾಳ:ಕೊರೊನಾದಿಂದ ಅನೇಕರ ಜೀವನ ಸಂಕಷ್ಟಕ್ಕೀಡಾಗಿದೆ. ಅದೇ ರೀತಿ ಕೆಲ ತಿಂಗಳಿನಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಜೀವ ಪಣಕ್ಕಿಟ್ಟು ಕೆಲಸ ಮಾಡುವ ಡಿ ದರ್ಜೆ ನೌಕರರಿಗೆ ವೇತನ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಅವರಿಗೆ ಜೀವನ ದೂಡುವುದು ಕಷ್ಟವಾಗಿದೆ.

ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಡಿ ದರ್ಜೆ ನೌಕರ ಬಸವರಾಜ ಬಡಿಗೇರ ಮಾತನಾಡಿ, ನಾವು ಮನೆ ಬಿಟ್ಟು ಆಸ್ಪತ್ರೆಯಲ್ಲಿಯೇ ಪ್ರತ್ಯೇಕ ಕೊಠಡಿಯಲ್ಲಿ ವಾಸಿಸುತ್ತಿದ್ದೇವೆ. ರೋಗಿಗಳ ಆರೈಕೆಯಲ್ಲಿ ನಿರತರಾಗಿದ್ದೇವೆ. ನಮಗೆ ಸೇವಾ ಭದ್ರತೆ, ವೇತನ ಕೆಲಸದಲ್ಲಿ ಮುಂದುವರೆಯಿರಿ ಎಂದು ಹೇಳಿದ ಆದೇಶ ಪ್ರತಿ ನೀಡುತ್ತಿಲ್ಲ. ನಮಗೇನಾದರೂ ಆದರೆ ಕುಟುಂಬದವರ ಗತಿ ಏನು? ಎಂದು ಪ್ರಶ್ನಿಸಿದರು.

ಡಿ-ದರ್ಜೆ ನೌಕರರ ಒತ್ತಾಯ

ಸಚಿವರಾದ ಶಶಿಕಲಾ ಜೊಲ್ಲೆ, ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರ ಗಮನಕ್ಕೂ ತಂದಿದ್ದೇವೆ. ಈವರೆಗೆ ಯಾವುದೇ ಪ್ರಯೋಜವಾಗಿಲ್ಲ ಎಂದು ಅಳಲು ತೋಡಿಕೊಂಡರು.

ಇನ್ನೋರ್ವ ನೌಕರ ಸಂತೋಷ್ ರಾಠೋಡ್ ಮಾತನಾಡಿ, ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರ ಜೊತೆಗೆ ನೇರ ಸಂಪರ್ಕದಲ್ಲಿ ನಾವು ಕೆಲಸ ಮಾಡುತ್ತೇವೆ. ನಮ್ಮಲ್ಲೂ ಕೆಲವರಿಗೆ ಪಾಸಿಟಿವ್ ಬಂದಿದೆ. ಆದರೂ ಉಳಿದವರು ಧೃತಿಗೆಡದೆ ಕೆಲಸ ಮುಂದುವರೆಸಿದ್ದೇವೆ. ನಮಗೆ ಕೂಡಲೇ ಸಂಬಳ ನೀಡಿ, ಸೇವೆಯಲ್ಲಿ ಮುಂದುವರೆಯುವ ಭದ್ರತೆ ಒದಗಿಸಿ ಎಂದು ಮನವಿ ಮಾಡಿದರು.

ABOUT THE AUTHOR

...view details