ವಿಜಯಪುರ:ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ಸಿಡಿ ಪ್ರಕರಣ ಕುರಿತು ಸಂತ್ರಸ್ತೆಯ ಮೂಲ ಹುಡುಕಿಕೊಂಡು ಬೆಂಗಳೂರಿನ ಕಬ್ಬನ್ ಪಾರ್ಕ್ ಠಾಣೆಯ ಪೊಲೀಸರು ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣಕ್ಕೆ ದೌಡಾಯಿಸಿದ್ದಾರೆ.
ಸಿಡಿ ಪ್ರಕರಣ: ಯುವತಿಯ ಅಜ್ಜಿ ಮನೆಯ ಬಾಗಿಲಿಗೆ ನೋಟಿಸ್ ಅಂಟಿಸಿದ ಕಬ್ಬನ್ ಪಾರ್ಕ್ ಪೊಲೀಸರು! - ವಿಜಯಪುರಕ್ಕೆ ಕಬ್ಬನ್ಪಾರ್ಕ್ ಪೊಲೀಸರ ಭೇಟಿ
13:36 March 14
ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲು ದೂರು ನೀಡಿದ್ದ ದಿನೇಶ್ ಕಲ್ಲಹಳ್ಳಿ ನೀಡಿದ ದೂರಿನಂತೆ ವಿಚಾರಣೆಗೆ ಬೆಂಗಳೂರಿನ ಕಬ್ಬನ್ಪಾರ್ಕ್ ಠಾಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ನಲ್ಲಿ ಸೂಚಿಸಿದ್ದಾರೆ.
ನಿಡಗುಂದಿಯ ಬಡಾವಣೆಯೊಂದರಲ್ಲಿ ವಾಸವಾಗಿದ್ದಾರೆ ಎನ್ನಲಾದ ಸಂತ್ರಸ್ತೆಯ ಕುಟುಂಬ ಹುಡುಕಿಕೊಂಡು ಬಂದಿದ್ದಾರೆ. ಯುವತಿಯ ತಾಯಿಯ ತವರು ಮನೆಗೆ ಹೋದ ಪೊಲೀಸರು ಅವರನ್ನು ಸಂಪರ್ಕಿಸಲು ಯತ್ನಿಸಿದ್ದಾರೆ. ಆದರೆ ಮನೆಗೆ ಹೋದಾಗ ಬೀಗ ಹಾಕಿತ್ತು. ಹೀಗಾಗಿ ಮನೆಗೆ ನೋಟಿಸ್ ಅಂಟಿಸಿ ಹೋಗಿದ್ದಾರೆ.
ನೋಟಿಸ್ನಲ್ಲಿರುವ ದೂರವಾಣಿ ಸಂಖ್ಯೆ ಹಾಗೂ ಈ-ಮೇಲ್ ಸಂಪರ್ಕಿಸುವಂತೆ ಸೂಚನೆ ನೀಡಿದ್ದಾರೆ. ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲು ದೂರು ನೀಡಿದ್ದ ದಿನೇಶ್ ಕಲ್ಲಹಳ್ಳಿ ನೀಡಿದ ದೂರಿನಂತೆ ವಿಚಾರಣೆಗೆ ಬೆಂಗಳೂರಿನ ಕಬ್ಬನ್ಪಾರ್ಕ್ ಪೊಲೀಸ್ ಠಾಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ಸಂತ್ರಸ್ತೆಯ ತಾಯಿಯ ತವರುಮನೆ ನಿಡಗುಂದಿಯಲ್ಲಿರುವುದಾಗಿ ಮಾಹಿತಿ ಹಿನ್ನೆಲೆ ಪೊಲೀಸರು ಅವರನ್ನು ಹುಡುಕಿಕೊಂಡು ನಿಡಗುಂದಿಗೆ ಬಂದಿದ್ದಾರೆ. ಹೀಗಾಗಿ ಇಲ್ಲಿಯೂ ಪ್ರಕರಣಕ್ಕೆ ಲಿಂಕ್ ಇರಬಹುದು ಎಂದು ಅವರನ್ನು ಹುಡುಕಿಕೊಂಡು ನಿಡಗುಂದಿಗೆ ಆಗಮಿಸಿದ್ದಾರೆ.