ವಿಜಯಪುರ: ಕೊರೊನಾ ವೈರಸ್ ಹಾಗೂ ಹಕ್ಕಿ ಜ್ವರದ ಭೀತಿ ಹಿನ್ನೆಲೆ ಸಾವಿರಾರು ಕೋಳಿಗಳ ಮಾರಣ ಹೋಮ ನಡೆದ ಘಟನೆ ಜಿಲ್ಲೆಯ ಬಬಲೇಶ್ವರ ತಾಲೂಕಿನ ಯಕ್ಕುಂಡಿಯಲ್ಲಿ ನಡೆದಿದೆ.
ಹಕ್ಕಿ ಜ್ವರ ಭೀತಿಯಿಂದ ಕೋಳಿಗಳ ಮಾರಣಹೋಮ... ಹಳ್ಳ ತೋಡಿ ಜೀವಂತ ಹೂತಿಟ್ಟ ಭೂಪ - ಕೋಳಿಗಳ ಮಾರಣ ಹೋಮ
ವಿಜಯಪುರದಲ್ಲಿ ಕೊರೊನಾ ವೈರಸ್ ಹಾಗೂ ಹಕ್ಕಿ ಜ್ವರದ ಭೀತಿ ಹಿನ್ನೆಲೆ, ಸಾವಿರಾರು ಕೋಳಿಗಳನ್ನು ಗುಂಡಿಯಲ್ಲಿ ಹಾಕಿ ಹೂತಿಡಲಾಗಿದೆ.
![ಹಕ್ಕಿ ಜ್ವರ ಭೀತಿಯಿಂದ ಕೋಳಿಗಳ ಮಾರಣಹೋಮ... ಹಳ್ಳ ತೋಡಿ ಜೀವಂತ ಹೂತಿಟ್ಟ ಭೂಪ ಕೋಳಿ](https://etvbharatimages.akamaized.net/etvbharat/prod-images/768-512-6384369-thumbnail-3x2-ugvf.jpg)
ಕೋಳಿ
ಗುಡೇಸಾಬ್ ಜಮಾದಾರ ಎಂಬಾತ 2,500ಕ್ಕೂ ಹೆಚ್ಚು ಕೋಳಿಗಳನ್ನು ತನ್ನ ಜಮೀನಿನಲ್ಲಿ ಹಳ್ಳ ತೋಡಿ ಅದರಲ್ಲಿ ಕೋಳಿಗಳನ್ನು ಹೂತಿಟ್ಟು ಮಾರಣಹೋಮ ನಡೆಸಿದ್ದಾನೆ.
ಹಳ್ಳ ತೋಡಿ ಕೋಳಿಗಳನ್ನು ಹೂತಿಟ್ಟ ಭೂಪ
ಈ ಮಾರಣ ಹೋಮದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೋಳಿಗಳ ಮಾರಣ ಹೋಮ ಮಾಡಿದ ಗುಡೇಸಾಬ್ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.