ಮುದ್ದೇಬಿಹಾಳ :ಕಳೆದ ಒಂದು ವಾರದಿಂದ ಅರಣ್ಯ ಇಲಾಖೆ ಹಾಗೂ ತಾಲೂಕಿನ ಹಡಲಗೇರಿ ಗ್ರಾಮ ಪಂಚಾಯಯತ್ ಆಡಳಿತ ನಡೆಸಿದ ಕಾರ್ಯಾಚರಣೆಗೆ ಫಲ ಸಿಕ್ಕಿದೆ. ಕೆರೆಯಲ್ಲಿ ಅವಿತುಕೊಂಡಿದ್ದ ಮೊಸಳೆಯನ್ನು ಭಾನುವಾರ ಸೆರೆ ಹಿಡಿಯಲಾಗಿದೆ.
ಹಡಲಗೇರಿ ಗ್ರಾಮದ ಹೊರವಲಯದ ಕೆರೆಯಲ್ಲಿ ಮೊಸಳೆ ಇದೆ ಎಂದು ಗ್ರಾಮಸ್ಥರು ಪಂಚಾಯತ್ ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಮಾಂಸದ ತುಂಡಿನೊಂದಿಗೆ ಬಲೆ ಹಾಕಿ ಮೊಸಳೆ ಸೆರೆಗೆ ಕಾರ್ಯಾಚರಣೆ ಕೈಗೊಂಡಿದ್ದರು.