ಕರ್ನಾಟಕ

karnataka

ETV Bharat / state

ಕನ್ನಡತಿ, ಕ್ರಿಕೆಟರ್​ ರಾಜೇಶ್ವರಿ ಗಾಯಕ್ವಾಡ್​ಗೆ ಗೌರವ ಡಾಕ್ಟರೇಟ್ ಪ್ರದಾನ

ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ​​, ಕನ್ನಡತಿ ರಾಜೇಶ್ವರಿ ಗಾಯಕ್ವಾಡ್‌ ಅವರಿಗೆ ರಾಜಸ್ಥಾನದ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

cricketer-rajeshwari-gayakwad-felicitated-with-honorary-doctorate
ಕನ್ನಡತಿ, ಕ್ರಿಕೆಟರ್​ ರಾಜೇಶ್ವರಿ ಗಾಯಕ್ವಾಡ್​ಗೆ ಗೌರವ ಡಾಕ್ಟರೇಟ್ ಪ್ರದಾನ

By

Published : Nov 17, 2022, 8:19 AM IST

ವಿಜಯಪುರ:ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್​​ ಸ್ಪಿನ್ನರ್​​, ಕನ್ನಡತಿ ವಿಜಯಪುರದ ರಾಜೇಶ್ವರಿ ಗಾಯಕ್ವಾಡ್‌ ಅವರಿಗೆ ರಾಜಸ್ಥಾನದ ಉದಯಪುರ ಎಸ್.ಪಿ.ಎಸ್.ಯು ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿ ನೀಡಿ ಸನ್ಮಾನಿಸಿದೆ. ಇತ್ತೀಚೆಗೆ ನಡೆದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಎಸ್.ಪಿ.ಎಸ್.ಯು ವಿಶ್ವವಿದ್ಯಾಲಯದ ಅಧ್ಯಕ್ಷ ಡಾ.ಪದ್ಮಕಲಿ ಬ್ಯಾನರ್ಜಿ ಮತ್ತು ಡಾ.ನಿಧಿಪತಿ ಸಿಂಗಾನಿಯಾ ಅವರು ಡಾಕ್ಟರೇಟ್ ಪದವಿ ಪ್ರದಾನ ಮಾಡಿದ್ದಾರೆ.

ಕ್ರಿಕೆಟರ್​ ರಾಜೇಶ್ವರಿ ಗಾಯಕ್ವಾಡ್​ಗೆ ಗೌರವ ಡಾಕ್ಟರೇಟ್

ಎಡಗೈ ಸ್ಪಿನ್ನರ್ ಆಗಿರುವ ರಾಜೇಶ್ವರಿ ಗಾಯಕ್ವಾಡ್‌ 2014ರಲ್ಲಿ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. ಇತ್ತೀಚೆಗೆ ನಡೆದ ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿಯೂ ತಂಡದ ಭಾಗವಾಗಿದ್ದರು. ಈ ಟೂರ್ನಿಯಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಮಹಿಳಾ ಕ್ರಿಕೆಟ್ ತಂಡವು ಫೈನಲ್ ಪ್ರವೇಶಿಸಿ ಬೆಳ್ಳಿ ಪದಕ ಜಯಿಸಿತ್ತು.

ರಾಜೇಶ್ವರಿ ಗಾಯಕ್ವಾಡ್‌ ಇದುವರೆಗೆ 64 ಏಕದಿನ ಪಂದ್ಯಗಳಿಂದ 99 ವಿಕೆಟ್​ ಹಾಗೂ 44 ಟಿ20 ಪಂದ್ಯಗಳಿಂದ 54 ವಿಕೆಟ್ ಸಾಧನೆ ಮಾಡಿದ್ದಾರೆ. 2 ಟೆಸ್ಟ್ ಪಂದ್ಯಗಳಲ್ಲೂ ಕಣಕ್ಕಿಳಿದಿದ್ದು, 5 ವಿಕೆಟ್​ ಉರುಳಿಸಿದ್ದಾರೆ.

ಇದನ್ನೂ ಓದಿ:ವಯಸ್ಸು ಬರೀ 12 ಒಲಿದ ಪದಕಗಳು 151.. ಇದು ವಂಡರ್ ಗರ್ಲ್ ಪವರ್​

ABOUT THE AUTHOR

...view details