ವಿಜಯಪುರ: ಸೀಲ್ ಡೌನ್ ಪ್ರದೇಶದಲ್ಲಿ ಸಿಲುಕಿದ ಹಸುಗಳು ತಿನ್ನಲು ಮೇವಿನ ಕೊರತೆಯಿಂದ ರಸ್ತೆ ಮೇಲೆ ನಿಲ್ಲುವಂತಾಗಿದೆ.
ಸೀಲ್ ಡೌನ್ ಪ್ರದೇಶದಲ್ಲಿ ಸಿಲುಕಿದ ಹಸುಗಳು... ಮೇವಿಗಾಗಿ ಪರದಾಟ - Cows stuck
ಜಿಲ್ಲಾಡಳಿತ ಗೋಲ ಗುಮ್ಮಟ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಪ್ರದೇಶವನ್ನ ಸಂಪೂರ್ಣವಾಗಿ ಸೀಲ್ ಡೌನ್ ಮಾಡಿದ ಪರಿಣಾಮ ಬಿಡಾಡಿ ದನಗಳಿಗೆ ಸೀಲ್ ಡೌನ್ ಪ್ರದೇಶದಿಂದ ಹೊರ ಹೋಗಲಾಗದೆ ಗೋಳಾಟ ನಡೆಸುತ್ತಿವೆ.
ನಗರದಲ್ಲಿ ಕೊರೊನಾ ಸೋಂಕು ಪತ್ತೆಯಾದ ವಿಚಾರ ತಿಳಿಯುತ್ತಿದ್ದಂತೆ ಜಿಲ್ಲಾಡಳಿತ ಗೋಲ ಗುಮ್ಮಟ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಪ್ರದೇಶವನ್ನ ಸಂಪೂರ್ಣವಾಗಿ ಸೀಲ್ ಡೌನ್ ಮಾಡಿದೆ. ಇನ್ನೂ ನಗರದ ಒಳ ರಸ್ತೆಗಳಿಗೂ ಕೂಡ ಪೊಲೀಸರು ಬ್ಯಾರಿಕೇಡ್ ಅಳವಡಿಕೆ ಮಾಡಿದ ಪರಿಣಾಮ ಬಿಡಾಡಿ ದನಗಳಿಗೆ ಸೀಲ್ ಡೌನ್ ಪ್ರದೇಶದಿಂದ ಹೊರ ಹೋಗಲಾಗದೆ ಗೋಳಾಟ ನಡೆಸುತ್ತಿವೆ.
ಚಪ್ಪರ್ ಬಂದ್ ಬಡಲಾವಣೆಯ ಮುಂಭಾಗದ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಿರುವುರಿಂದ ಬಿಡಾಡಿ ದನಗಳು ಹೊರ ಬರಲಾಗದೆ, ತಿನ್ನಲು ಸರಿಯಾದ ಆಹಾರ ಸಿಗದೆ, ಸೀಲ್ ಡೌನ್ ಪ್ರದೇಶದಲ್ಲಿ ನಡು ರಸ್ತೆಯಲ್ಲಿ ನಿಂತಿವೆ. ಜಿಲ್ಲೆಯಲ್ಲಿ ಆರು ಕೂರೊನಾ ವೈರಸ್ ಸೋಂಕು ಪತ್ತೆಯಾಗುತ್ತಿದ್ದಂತೆ ಸಾರ್ವಜನಿಕರು ಕೂಡ ತಮ್ಮ ಬಡಾವಣೆಯ ರಸ್ತೆಗಳನ್ನ ಸಂಪೂರ್ಣವಾಗಿ ಬಂದ್ ಮಾಡಿದ್ದಾರೆ ಹೀಗಾಗಿ ಹಸುಗಳು ನಡು ರಸ್ತೆಯಲ್ಲಿ ನಿಲ್ಲುವಂತಾಗಿದೆ.