ವಿಜಯಪುರ: ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಉಂಟಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ದಂಪತಿ ಬರೋಬ್ಬರಿ 6 ವರ್ಷದ ನಂತರ 9 ವರ್ಷದ ಮಗಳ ಸಮ್ಮುಖದಲ್ಲಿ ಭಿನ್ನಾಭಿಪ್ರಾಯ ಮರೆತು ಮತ್ತೊಮ್ಮೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಪ್ರಕರಣ ಹಿನ್ನೆಲೆ:
ಬಸವನಬಾಗೇವಾಡಿ ಪಟ್ಟಣದ ಸಿವಿಲ್ ನ್ಯಾಯಾಲಯದಲ್ಲಿ 6 ವರ್ಷಗಳ ಹಿಂದೆ ಯೋಧ ವಿಜಯ ಮಹಾಂತೇಶ ಕುಬಸದ ಹಾಗೂ ಅವರ ಪತ್ನಿ ಸೌಮ್ಯ ಕುಬಸದ ಸಂಸಾರಿಕ ಭಿನ್ನಾಭಿಪ್ರಾಯದಿಂದ ಪರಸ್ಪರ ಒಪ್ಪಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ಹಲವು ವರ್ಷಗಳಿಂದ ನಡೆಯುತ್ತಲೇ ಬಂದಿತ್ತು. ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಶಲವಡಿ ಗ್ರಾಮದ ಯೋಧ ವಿಜಯ ಮಹಾಂತೇಶ ಚನ್ನಬಸಪ್ಪ ಕುಬಸದ ವಿಜಯಪುರ ಜಿಲ್ಲೆಯ ಕೊಲ್ಹಾರದ ಸೌಮ್ಯ ರಾಜಶೇಖರ ರಶ್ಮಿ ಅವರ ವಿವಾಹ 2009ರಲ್ಲಿ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಮಹಾಕೂಟದಲ್ಲಿ ನೇರವೇರಿತ್ತು. 2015ರಲ್ಲಿ ದಂಪತಿಯಲ್ಲಿ ಭಿನ್ನಾಭಿಪ್ರಾಯ ಉಂಟಾಗಿ ಬಸವನ ಬಾಗೇವಾಡಿ ಸಿವಿಲ್ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಕಳೆದ 6 ವರ್ಷಗಳಿಂದ ವಿಚ್ಛೇದನಕ್ಕಾಗಿ ನ್ಯಾಯಾಲಯಕ್ಕೆ ಅಲೆಯುತ್ತಿದ್ದರು. ಇವರಿಗೆ ಹೆಣ್ಣು ಮಗು ಸಹ ಇತ್ತು. ಇವರಿಬ್ಬರ ಮನಸ್ತಾಪ ಆ ಹೆಣ್ಣು ಮಗುವಿನ ಮೇಲೆ ಸಾಕಷ್ಟು ಪರಿಣಾಮ ಬೀರಿತ್ತು.
ಲೋಕ ಅದಾಲತ್ನಲ್ಲಿ ಇತ್ಯರ್ಥ: