ವಿಜಯಪುರ: ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದ ಬಸವರಾಜ ಕೋಲಕಾರ ಎಂಬ ರೈತಭೋಗ್ಯಕ್ಕೆಂದು ಪಡೆದ 4 ಎಕರೆ ಭೂಮಿಯಲ್ಲಿ ಬೆಳೆದಿದ್ದ ಕಲ್ಲಂಗಡಿ ಮಾರಾಟ ಮಾಡಲಾಗದೆ ಮನೆಯಲ್ಲಿ ಚಿಂತೆಗೀಡಾಗಿದ್ದಾನೆ.
ಕಲ್ಲಂಗಡಿ ಹಣ್ಣು ಕೇಳೋರಿಲ್ರೀ, ಹಿಂಗಾದ್ರೇ ಹಿಂಗ್‌ರೀ ಬಾಳೇವ್.. - cannot sell watermelon
ಮಾರುಕಟ್ಟೆಯಲ್ಲಿ ಕಲ್ಲಂಗಡಿ ಮಾರಲು ಹೋದರೆ ಪೊಲೀಸರು ಲಾಠಿ ಬೀಸುತ್ತಾರೆ ಎನ್ನುವ ಭಯದಿಂದ ಮುಂದೇನು ಮಾಡಬೇಕು ಎನ್ನುವ ಚಿಂತೆಯಲ್ಲಿ ರೈತನಿದ್ದಾನೆ.
ದೇಶದಾದ್ಯಂತ ಲಾಕ್ಡೌನ್: ಕಲ್ಲಂಗಡಿ ಮಾರಲಾಗದೇ ಕಂಗಲಾದ ರೈತ
ಸುತ್ತಮುತ್ತ ಗ್ರಾಮಗಳಲ್ಲಿ ತೆಗೆದುಕೊಂಡು ಹೋಗಿ ಕಲ್ಲಂಗಡಿ ಮಾರಾಟ ಮಾಡಬೇಕೆಂದರೂ ಅಧಿಕಾರಿಗಳು ಅನುಮತಿ ನೀಡುತ್ತಿಲ್ಲ. ಅಂದಾಜು ₹5 ಲಕ್ಷ ಖರ್ಚು ಮಾಡಿ ರೈತ ಕಲ್ಲಂಗಡಿ ಬೆಳೆದಿದ್ದಾನೆ. ಕನಿಷ್ಠ ₹ 8 ಲಕ್ಷದವರೆಗೆ ಲಾಭ ಬರಬಹುದು ಎಂದು ಅಂದಾಜಿಸಿದ್ದ. ಅಸಲಿಗೆ ಈ ಹೊಲ ಸೇನೆಯಲ್ಲಿರುವ ಯೋಧ ಪ್ರಕಾಶ ಹೂಗಾರ್ ಎಂಬುವರಿಗೆ ಸೇರಿದ್ದಾಗಿದೆ. ಅದನ್ನು ಭೋಗ್ಯಕ್ಕೆ ಹಾಕಿಕೊಂಡು ಕಲ್ಲಂಗಡಿ ಬೆಳೆದಿದ್ದಾನೆ.
ಮಾರುಕಟ್ಟೆಯಲ್ಲಿ ಕಲ್ಲಂಗಡಿ ಮಾರಲು ಹೋದರೆ ಪೊಲೀಸರು ಲಾಠಿ ಬೀಸುತ್ತಾರೆ ಎನ್ನುವ ಭಯದಿಂದ ಮುಂದೇನು ಮಾಡಬೇಕು ಎನ್ನುವ ಚಿಂತೆಯಲ್ಲಿ ರೈತನಿದ್ದಾನೆ.