ಕರ್ನಾಟಕ

karnataka

ETV Bharat / state

ವಿಜಯಪುರ: ಬೈಕ್​ ಸಹಿತ ಬಾವಿಯಲ್ಲಿ ಯುವಕ ಶವವಾಗಿ ಪತ್ತೆ, ಕೊಲೆ ಶಂಕೆ - ಬಾವಿಯಲ್ಲಿ ಯುವಕನ ಶವ ಪತ್ತೆ ಸುದ್ದಿ ವಿಜಯಪುರ

ಬಾವಿಯಲ್ಲಿ ಯುವಕನೋರ್ವ ಶವವಾಗಿ ಪತ್ತೆಯಾಗಿರುವ ಪ್ರಕರಣ ವಿಜಯಪುರ ನಗರದ ಪೇಟೆ ಬಾವಡಿಯಲ್ಲಿ ನಡೆದಿದೆ.

Corpse of a young man found in a well
ಪತ್ತೆಯಾದ ಯುವಕನ ಶವ

By

Published : Nov 28, 2019, 2:37 PM IST

ವಿಜಯಪುರ: ಬಾವಿಯಲ್ಲಿ ಯುವಕನ ಶವ ಪತ್ತೆಯಾದ ಘಟನೆ ನಗರದ ಪೇಟಿ ಬಾವಡಿಯಲ್ಲಿ ನಡೆದಿದೆ.

ವಿಜಯಪುರ ಬಾವಿಯಲ್ಲಿ ಯುವಕನ ಶವ ಪತ್ತೆ

ಗಚ್ಚಿನ ಮಹಲ್ ಕಾಲೋನಿಯ ಖಾಶಿಮ್ ಖಾದ್ರಿ (30) ಎಂಬ ಯುವಕ ಶವವಾಗಿ ಪತ್ತೆಯಾಗಿದ್ದು, ಬಾವಿಯ ಬಳಿ ಕಂಡು ಬಂದ ರಕ್ತದ ಕಲೆ, ಬಿಯರ್ ಬಾಟಲ್ ಪತ್ತೆಯಾಗಿರುವುದರಿಂದ ಖಾಸಿಮ್​ನನ್ನು ಕೊಲೆಗೈದು ಬಾವಿಯಲ್ಲಿ ಎಸೆದಿರುವ ಶಂಕೆ ವ್ಯಕ್ತವಾಗಿದೆ.

ಮೃತ ಖಾಸಿಂ ಶವದ ಜತೆ ಆತನ ಬೈಕ್ ಸಹ ಬಾವಿಯಲ್ಲಿ ಪತ್ತೆಯಾಗಿದೆ. ಇದು ಹಲವು ಶಂಕೆಗೆ ಕಾರಣವಾಗಿದ್ದು, ಬೈಕ್ ಸಮೇತ ಖಾಸಿಂ ಬಾವಿಗೆ ಬಿದ್ದಿದ್ದಾನೆಯೇ ಅಥವಾ ಯಾರೋ ಆತನನ್ನು ಬಾವಿಗೆ ಎಸೆದು ನಂತರ ಬೈಕ್​ನ್ನು ಸಹ ಬಾವಿಯಲ್ಲಿ ತಳ್ಳಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಗೋಲಗುಮ್ಮಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details