ಮುದ್ದೇಬಿಹಾಳ: ಕೋ-ಆಪರೇಟಿವ್ ಸೊಸೈಟಿಯೊಂದರ ಕ್ಯಾಷಿಯರ್ ಶವ ತಾಲೂಕಿನ ಸಿದ್ದಾಪೂರ ಪಿ.ಟಿ. ಗ್ರಾಮದ ಕೆಬಿಜೆಎನ್‌ಎಲ್ ಕಾಲುವೆಯಲ್ಲಿ ಸೋಮವಾರ ಪತ್ತೆಯಾಗಿದೆ.
ಮುದ್ದೇಬಿಹಾಳ: ಅನುಮಾನಾಸ್ಪದವಾಗಿ ಕಾಲುವೆಯಲ್ಲಿ ಕ್ಯಾಷಿಯರ್ ಶವ ಪತ್ತೆ - Corpse found in Muddebhila
ಮುದ್ದೇಬಿಹಾಳದಲ್ಲಿ ಅನುಮಾನಾಸ್ಪದವಾಗಿ ಕೋ-ಆಪರೇಟಿವ್ ಸೊಸೈಟಿಯೊಂದರ ಕ್ಯಾಷಿಯರ್ ಶವ ಪತ್ತೆಯಾಗಿದೆ.
ಪವನ್ ಶ್ರೀನಿವಾಸ ಬೋಣಗೇರ (26) ಮೃತ ವ್ಯಕ್ತಿ. ಮನೆಯಿಂದ ಹೊರ ಹೋದವರು ವಾಪಸ್ ಎರಡು ದಿನಗಳಾದರೂ ಮನೆಗೆ ಮರಳಿರಲಿಲ್ಲ. ಇದರಿಂದ ಅನುಮಾನಗೊಂಡ ಕುಟುಂಬಸ್ಥರು ಪೊಲೀಸರಿಗೆ ತಮ್ಮ ಮಗ ಕಾಣೆಯಾಗಿರುವ ಕುರಿತು ದೂರು ನೀಡಿದ್ದರು.
ಏತನ್ಮಧ್ಯೆ ಇಂದು ಸಿದ್ದಾಪುರದ ಕಾಲುವೆಯಲ್ಲಿ ಶವವೊಂದು ಕಾಲುವೆಯಲ್ಲಿ ಪತ್ತೆಯಾಗಿದೆ ಎಂಬ ಸುದ್ದಿ ತಿಳಿದ ಪೊಲೀಸರು ಬೋಣಗೇರ ಕುಟುಂಬದವರನ್ನು ಸ್ಥಳಕ್ಕೆ ಕರೆಯಿಸಿ ಶವದ ಗುರುತು ಪತ್ತೆ ಹಚ್ಚಿದ್ದಾರೆ. ಶವವನ್ನು ಗಮನಿಸಿದ ಕುಟುಂಬದವರು ಗುರುತು ಪತ್ತೆ ಹಚ್ಚಿದ್ದಾರೆ. ಕಾಲುವೆಯ ದಡದಲ್ಲಿಯೇ ಬೈಕ್, ಮೃತಪಟ್ಟಿರುವ ವ್ಯಕ್ತಿಯ ಚಪ್ಪಲಿ ದೊರೆತಿದ್ದು, ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.