ವಿಜಯಪುರ/ಮುದ್ದೇಬಿಹಾಳ:ದೇಶದಾದ್ಯಂತ ಕೊರೊನಾ ದಿನೇ ದಿನೆ ಹೆಚ್ಚುತ್ತಿದ್ದು, ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಈ ಹಿನ್ನೆಲೆ ಎಲ್ಲಾ ದೇವಾಲಯಗಳನ್ನು ಮುಚ್ಚಲಾಗಿದೆ. ಇದೀಗ ನಗರದ ಮಾರುತೇಶ್ವರ ದೇವಾಲಯದ ಓಕಳಿ ಜಾತ್ರಾ ಮಹೋತ್ಸವವನ್ನು ರದ್ದು ಮಾಡಲಾಗಿದೆ.
ಕೊರೊನಾ ಭೀತಿ: ಮುದ್ದೇಬಿಹಾಳದ ಮಾರುತೇಶ್ವರ ಓಕಳಿ ಜಾತ್ರೆ ರದ್ದು - ಜಾತ್ರೆ ನಿಷೇಧ
ಕೊರೊನಾ ಹರಡುವ ಭೀತಿಯಲ್ಲಿ ಲಾಕ್ಡೌನ್ ಜಾರಿಮಾಡಲಾಗಿದೆ. ಇದಿರಂದ ದೇಶದ ಎಲ್ಲಾ ಭಾಗದಲ್ಲೂ ಜಾತ್ರಾ ಮಹೋತ್ಸವಗಳು, ಸಾಮೂಹಿಕ ಪ್ರಾರ್ಥನೆ, ಉತ್ಸವಗಳನ್ನು ನಿಷೇಧಿಸಲಾಗಿದೆ.
ಕೊರೊನಾ ಭೀತಿ: ಮುದ್ದೇಬಿಹಾಳದ ಮಾರುತೇಶ್ವರ ಓಕಳಿ ಜಾತ್ರೆ ನಿಷೇಧ
ಕೊರೊನಾ ಹರಡುವ ಭೀತಿಯಿಂದ ಲಾಕ್ಡೌನ್ ಮಾಡಲಾಗಿದೆ. ಈ ಹಿನ್ನೆಲೆ ಮುದ್ದೇಬಿಹಾಳದ ಆಲೂರ ಗ್ರಾಮದಲ್ಲಿ ಏ. 25 ಹಾಗೂ 26ರಂದು ನಡೆಯಬೇಕಿದ್ದ ಮಾರುತೇಶ್ವರ ದೇವಸ್ಥಾನ ಹಾಗೂ ಓಕಳಿ ಜಾತ್ರೆಯನ್ನು ರದ್ದು ಮಾಡಲಾಗಿದೆ.
ಜಾತ್ರೆ ರದ್ದು ಕುರಿತು ತಹಶೀಲ್ದಾರ್ ಜಿ.ಎಸ್. ಮಳಗಿ, ಸಿಪಿಐ ಆನಂದ ವಾಗ್ಮೋಡೆ ಹಾಗೂ ತಾಲೂಕು ಪಂಚಾಯಿತಿ ಇಒ ಶಶಿಕಾಂತ ಶಿವಪೂರೆ ಜಂಟಿಯಾಗಿ ಮಾಹಿತಿ ನೀಡಿದ್ದಾರೆ.