ಕರ್ನಾಟಕ

karnataka

ETV Bharat / state

ವಿಜಯಪುರ ಜಿಲ್ಲೆಯಲ್ಲಿ ಇಂದು ಹೊಸದಾಗಿ 113 ಜನರಲ್ಲಿ ಕೊರೊನಾ ಸೋಂಕು ದೃಢ - ವಿಜಯಪುರ 113 ಜನರಲ್ಲಿ ಕೊರೊನಾ ಸೋಂಕು ದೃಢ

ನಾನಾ ಕಾಯಿಲೆ ಜತೆಗೆ ಕೊರೊನಾ ಸೋಂಕು ತಗುಲಿ ಸಾವಿಗೀಡಾದವರ ಸಂಖ್ಯೆ 36ಕ್ಕೆ ಏರಿಕೆಯಾಗಿದೆ. ಈಗ 912 ಸೋಂಕಿತರು ವಿಜಯಪುರ ಜಿಲ್ಲಾಸ್ಪತ್ರೆ ಸೇರಿ ಇತರ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ..

Vijayapur
ವಿಜಯಪುರ

By

Published : Aug 2, 2020, 8:51 PM IST

ವಿಜಯಪುರ :ಇಂದು ಹೊಸದಾಗಿ 113 ಜನರಲ್ಲಿ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 3,131ಕ್ಕೆ ಏರಿದೆ.

ಇಂದು 68 ಜನ ಸೇರಿ ಈವರೆಗೂ ಕೊರೊನಾದಿಂದ 2,184 ಜನ ಗುಣಮುಖರಾದಂತಾಗಿದೆ. ಇಂದು ನಾನಾ ಕಾಯಿಲೆ ಜತೆಗೆ ಸೋಂಕು ತಗುಲಿ ಓರ್ವ ಸಾವನ್ನಪ್ಪಿದ್ದಾನೆ.

61 ವರ್ಷದ ರೋಗಿಯನ್ನ ( ನಂ. 82513) ಉಸಿರಾಟದ ತೊಂದರೆಯಿಂದ ಜುಲೈ 14ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ವರದಿ ಪಾಸಿಟಿವ್ ಬಂದಿತ್ತು. ಜುಲೈ 17ರಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ನಾನಾ ಕಾಯಿಲೆ ಜತೆಗೆ ಕೊರೊನಾ ಸೋಂಕು ತಗುಲಿ ಸಾವಿಗೀಡಾದವರ ಸಂಖ್ಯೆ 36ಕ್ಕೆ ಏರಿಕೆಯಾಗಿದೆ. ಈಗ 912 ಸೋಂಕಿತರು ವಿಜಯಪುರ ಜಿಲ್ಲಾಸ್ಪತ್ರೆ ಸೇರಿ ಇತರ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ABOUT THE AUTHOR

...view details