ವಿಜಯಪುರ: ಕೇವಲ ಒಂದು ಪೊಲೀಸ್ ಠಾಣೆಗೆ ಸೀಮಿತವಾಗಿದ್ದ ಕೊರೊನಾ ಸೋಂಕಿತ ಪ್ರಕರಣಗಳು, ಈಗ ಮತ್ತೆ ಎರಡು ಪೋಲಿಸ್ ಠಾಣೆಗಳಿಗೆ ವ್ಯಾಪಿಸಿಕೊಂಡಿದೆ.
ವಿಜಯಪುರದಲ್ಲಿ ಕೊರೊನಾ ಶಾಕ್: ಮತ್ತೆರಡು ಪೊಲೀಸ್ ಠಾಣೆಗಳು ಸೀಲ್ಡೌನ್ - Basavasan Bagewadi Police
ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಹಾಗೂ ಕೂಡಗಿ ಪೋಲಿಸ್ ಠಾಣೆಯ ಇಬ್ಬರು ಪೋಲಿಸ್ ಕಾನ್ಸ್ಟೇಬಲ್ಗಳಿಗೆ ಸೋಂಕು ತಗುಲಿದೆ. ಬಸವನಬಾಗೇವಾಡಿ ಠಾಣೆಯನ್ನು ಪೊಲೀಸ್ ವಸತಿ ಗೃಹಕ್ಕೆ ಹಾಗೂ ಕೂಡಗಿ ಠಾಣೆಯನ್ನು ನಿಡಗುಂದಿ ಪೋಲಿಸ್ ಠಾಣೆ ಆವರಣಕ್ಕೆ ಶಿಫ್ಟ್ ಮಾಡಲಾಗಿದೆ.

ವಿಜಯಪುರದಲ್ಲಿ ಕೊರೊನಾ ಶಾಕ್: ಮತ್ತೊಂದು ಪೊಲೀಸ್ ಠಾಣೆ ಸೀಲ್ಡೌನ್
ವಿಜಯಪುರದ ಜಲನಗರ ಪೊಲೀಸ್ ಠಾಣೆಯಲ್ಲಿ ಬಂಧಿತನಾಗಿದ್ದ ಆರೋಪಿಗೆ ಸೋಂಕು ತಗುಲಿದ ಬೆನ್ನಲ್ಲೇ ಬಸವನಬಾಗೇವಾಡಿ ಹಾಗೂ ಕೂಡಗಿ ಪೊಲೀಸ್ ಠಾಣೆಗಳಿಗೂ ಹರಡಿದೆ. ಒಟ್ಟು ಮೂರು ಪೊಲೀಸ್ ಠಾಣೆಗಳನ್ನು ಸೀಲ್ಡೌನ್ ಮಾಡಲಾಗಿದೆ.
ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಹಾಗೂ ಕೂಡಗಿ ಪೋಲಿಸ್ ಠಾಣೆಯ ಇಬ್ಬರು ಪೋಲಿಸ್ ಕಾನ್ಸ್ಟೇಬಲ್ಗಳಿಗೆ ಸೋಂಕು ತಗುಲಿದೆ. ಬಸವನಬಾಗೇವಾಡಿ ಠಾಣೆಯನ್ನು ಪೊಲೀಸ್ ವಸತಿ ಗೃಹಕ್ಕೆ ಹಾಗೂ ಕೂಡಗಿ ಠಾಣೆಯನ್ನು ನಿಡಗುಂದಿ ಪೋಲಿಸ್ ಠಾಣೆ ಆವರಣಕ್ಕೆ ಶಿಫ್ಟ್ ಮಾಡಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅನುಪಮ ಅಗರವಾಲ್ ತಿಳಿಸಿದ್ದಾರೆ.