ವಿಜಯಪುರ:ಭಾರತದಲ್ಲಿ ಕೊರೊನಾ ವೈರಸ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ಸೋಂಕು ತಗುಲಿದ ರೋಗಿಗಳಿಗಾಗಿ ಪ್ರತ್ಯಕ ವಾರ್ಡ್ ನಿರ್ಮಿಸಿದೆ.
ವಿಜಯಪುರ ಜಿಲ್ಲೆಯಲ್ಲಿ ಕೊರೊನಾ ವೈರಸ್ (ಕೋವಿಡ್19) ತಡೆಗಟ್ಟಲು ಹಾಗೂ ವೈರಸ್ ಪತ್ತೆಯಾದ ರೋಗಿಗಳಿಗೆ ಔಷಧೋಪಚಾರ ನೀಡಲು ಜಿಲ್ಲಾಸ್ಪತ್ರೆಯಲ್ಲಿ ನೂತನವಾಗಿ 10 ಹಾಸಿಗೆಯುಳ್ಳ ವಾರ್ಡ್ ನಿರ್ಮಿಸಲಾಗಿದೆ.
ಕೊರೊನಾ ಮುಂಜಾಗ್ರತೆ: ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ಕೊರೊನಾ ವೈರಸ್ ತಗುಲಿದ ರೋಗಿಗಳ ಉಪಚಾರಕ್ಕೆ ಬೇಕಾದ ಮಾತ್ರೆಗಳು, ಮಾಸ್ಕ್, ಸೇರಿದಂತೆ ಅನೇಕ ಔಷಧಿಗಳನ್ನ ರೋಗಿಗಳಿಗೆ ಚಿಕಿತ್ಸೆ ನೀಡಲು ಇಡಲಾಗಿದೆ. ಇನ್ನೂ ವೈರಸ್ ಪತ್ತೆಯಾದ ರೋಗಿಗಳನ್ನ ನೋಡಿಕೊಳ್ಳಲು ಇಬ್ಬರು ವೈದ್ಯರು, ಹಾಗೂ 8 ಹೆಚ್ಚುವರಿ ನರ್ಸ್‌ಗಳನ್ನ ನೇಮಿಸಲಾಗಿದೆ.
ಒಟ್ಟಿನಲ್ಲಿ ಕೊರೊನಾ ವೈರಸ್ ತಡೆಗಟ್ಟಲು ಜಿಲ್ಲಾಸ್ಪತ್ರೆ ಜನರಲ್ಲಿ ಜಾಗೃತಿ ಮೂಡಿಸುತ್ತಿರುವುದು ಒಂದು ಕಡೆಯಾದ್ರೆ. ಮುಂಜಾಗ್ರತಾ ಕ್ರಮವಾಗಿ ಸೋಂಕು ತಗುಲಿದ ರೋಗಿಗಳಿಗೆ ವೈದ್ಯೋಪಚಾರ ಮಾಡಲು ಪ್ರತ್ಯೇಕ ವಾರ್ಡ್ ವ್ಯವಸ್ಥೆ ಮಾಡಿರುವುದು ವಿಶೇಷ.