ವಿಜಯಪುರ :ಜಿಲ್ಲೆಯಲ್ಲಿ ಇಂದು ಒಂದೇ ದಿನ 53 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಇದರಿಂದಾಗಿ ಸೋಂಕಿತರ ಸಂಖ್ಯೆ 187ಕ್ಕೆ ಏರಿದೆ.
ವಿಜಯಪುರದಲ್ಲಿ ಇಂದು ಒಂದೇ ದಿನ 53 ಜನರಿಗೆ ಕೊರೊನಾ ಪಾಸಿಟಿವ್.. - vijayapur corona pandemic
ಇವರಲ್ಲಿ 39 ಜನ ಮಹಾರಾಷ್ಟ್ರದಿಂದ ವಿಜಯಪುರಕ್ಕೆ ಆಗಮಿಸಿ ಕ್ವಾರಂಟೈನ್ನಲ್ಲಿದ್ದರು. ಉಳಿದ 14 ಜನ ವಿಜಯಪುರ ಕಂಟೇನ್ಮೆಂಟ್ ಪ್ರದೇಶದಲ್ಲಿ ವಾಸಿಸುತ್ತಿದ್ದರು.
ವಿಜಯಪುರದಲ್ಲಿ ಇಂದು ಒಂದೇ ದಿನ 53 ಜನರಿಗೆ ಕೊರೊನಾ ಪಾಸಿಟಿವ್
53 ಜನರ ಪೈಕಿ ಓರ್ವ ಬಾಲಕ, ಮೂವರು ಬಾಲಕಿಯರು, 7 ಯುವಕರು, 4 ಯುವತಿಯರು, 23 ಪುರುಷರು ಮತ್ತು 15 ಮಹಿಳೆಯರು. ಇವರಲ್ಲಿ 39 ಜನ ಮಹಾರಾಷ್ಟ್ರದಿಂದ ವಿಜಯಪುರಕ್ಕೆ ಆಗಮಿಸಿ ಕ್ವಾರಂಟೈನ್ನಲ್ಲಿದ್ದರು. ಉಳಿದ 14 ಜನ ವಿಜಯಪುರ ಕಂಟೇನ್ಮೆಂಟ್ ಪ್ರದೇಶದಲ್ಲಿ ವಾಸಿಸುತ್ತಿದ್ದರು.
ಸದ್ಯ ಇವರೆಲ್ಲರಿಗೂ ವಿಜಯಪುರ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.