ವಿಜಯಪುರ:ಜಿಲ್ಲೆಯಲ್ಲಿಂದು 90 ವರ್ಷದ ವೃದ್ಧೆ ಸೇರಿ 22 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ವಿಜಯಪುರ ಜಿಲ್ಲೆಯಲ್ಲಿಂದು 22 ಜನರಿಗೆ ಕೊರೊನಾ - vijayapura corona update
ವಿಜಯಪುರ ಜಿಲ್ಲೆಯಲ್ಲಿಂದು 90 ವರ್ಷದ ವೃದ್ಧೆ ಸೇರಿ 22 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 360ಕ್ಕೆ ಏರಿಕೆಯಾಗಿದೆ.
ವಿಜಯಪುರ ಜಿಲ್ಲೆಯಲ್ಲಿಂದು 22 ಜನರಿಗೆ ಕೊರೊನಾ ಪಾಸಿಟಿವ್
ಈ ಪೈಕಿ 8 ಜನ ಪುರುಷ, 6 ಮಹಿಳೆ, 3 ಯುವಕರು, 3 ಯುವತಿಯರು ಹಾಗೂ ಇಬ್ಬರು ಬಾಲಕಿಯರು ಸೇರಿದ್ದು, ಇವರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟು 360 ಸೋಂಕಿತರ ಪೈಕಿ 290 ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಇನ್ನೂ 63 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, 61 ಜನರ ಗಂಟಲು ದ್ರವ ಮಾದರಿಯ ವರದಿ ಬರಬೇಕಾಗಿದೆ. ಜಿಲ್ಲೆಯಲ್ಲಿ 7 ಜನ ಸೋಂಕಿನಿಂದ ಮೃತಪಟ್ಟಿದ್ದಾರೆ.