ವಿಜಯಪುರ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಯಾವುದೇ ಪಾಸಿಟಿವ್ ಪ್ರಕರಣ ದಾಖಲಾಗದಿರುವುದು ಜನತೆ ನಿಟ್ಟುಸಿರು ಬಿಡುವಂತಾಗಿದೆ.
ವಿಜಯಪುರದಲ್ಲಿ ಎರಡು ದಿನದಿಂದ ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿಲ್ಲ: ಡಿಸಿ - ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಸ್ಪಷ್ಟನೆ
ವಿಜಯಪುರ ಜಿಲ್ಲೆಯಲ್ಲಿ ಅತಿ ಹೆಚ್ಚು ಪಾಸಿಟಿವ್ ಪ್ರಕರಣ ದಾಖಲಾಗಿರುವ ಚಪ್ಪರಬಂದ್ ಕಾಲೋನಿ, ಪಾಸಿಟಿವ್ ಬಂದಿರುವ ಪತ್ರಕರ್ತನ ನಿವಾಸವಿರುವ ನಾಲಬಂದ್ ಚೌಕ್ ಈಗಾಗಲೇ ಸೀಲ್ ಡೌನ್ ಆಗಿವೆ. ಪಾಸಿಟಿವ್ ಪ್ರಕರಣದಿಂದ ಮೃತಪಟ್ಟಿರುವ ವ್ಯಕ್ತಿ ವಾಸವಿದ್ದ ತಿಕೋಟಾ ತಾಲೂಕಿನ ರತ್ನಾಪುರ ಗ್ರಾಮ ಸಹ ಸೀಲ್ ಡೌನ್ ಆಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಅತಿ ಹೆಚ್ಚು ಪಾಸಿಟಿವ್ ಪ್ರಕರಣ ದಾಖಲಾಗಿರುವ ಚಪ್ಪರಬಂದ್ ಕಾಲೋನಿ, ಪಾಸಿಟಿವ್ ಬಂದಿರುವ ಪತ್ರಕರ್ತನ ನಿವಾಸವಿರುವ ನಾಲಬಂದ್ ಚೌಕ್ ಈಗಾಗಲೇ ಸೀಲ್ ಡೌನ್ ಆಗಿವೆ. ಪಾಸಿಟಿವ್ ಪ್ರಕರಣದಿಂದ ಮೃತಪಟ್ಟಿರುವ ವ್ಯಕ್ತಿ ವಾಸವಿದ್ದ ತಿಕೋಟಾ ತಾಲೂಕಿನ ರತ್ನಾಪುರ ಗ್ರಾಮ ಸಹ ಸೀಲ್ ಡೌನ್ ಆಗಿದೆ. ಇದು ಬಿಟ್ಟರೆ ಉಳಿದ ಪ್ರದೇಶದಲ್ಲಿ ಲಾಕ್ಡೌನ್ ಮುಂದುವರೆದಿದೆ ಎಂದರು. ಇಲ್ಲಿಯವರೆಗೆ 41 ಪಾಸಿಟಿವ್ ಪ್ರಕರಣ ದಾಖಲಾಗಿರುವ ಕಾರಣ ವಿಜಯಪುರ ಜಿಲ್ಲೆಯನ್ನು ರೆಡ್ ಝೋನ್ ವ್ಯಾಪ್ತಿಗೆ ಸೇರಿಸಲಾಗಿದೆ. ಮುಂದೆ ಇದೇ ರೀತಿ ಪಾಸಿಟಿವ್ ಪ್ರಕರಣ ಕಡಿಮೆಯಾಗುತ್ತಾ ಬಂದರೆ ಆರೆಂಜ್ ಝೋನ್ ವ್ಯಾಪ್ತಿಗೆ ಬರುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ ಎಂದರು.
ಇಲ್ಲಿಯವರೆಗೆ 1925 ಜನರ ಮೇಲೆ ನಿಗಾ ಇಡಲಾಗಿದೆ. 424 ಮಂದಿ 28 ದಿನಗಳ ಕ್ವಾರೆಂಟೈನ್ ಅವಧಿ ಮುಗಿಸಿದ್ದಾರೆ. 1499 ಮಂದಿ ಇನ್ನೊಂದು ಕ್ವಾರೆಂಟೈನ್ನಲ್ಲಿದ್ದಾರೆ. ಇಲ್ಲಿಯವರೆಗೆ ಇಬ್ಬರು ಸಾವನ್ನಪ್ಪಿದ್ದು, 6 ಜನ ಗುಣಮುಖರಾಗಿದ್ದಾರೆ. ಆಸ್ಪತ್ರೆಯ ಐಸೊಲೇಷನ್ನಲ್ಲಿ 55 ಜನ ಇದ್ದಾರೆ. ಇಲ್ಲಿಯವರೆಗೆ 1957 ಜನರ ಗಂಟಲು ದ್ರವ ಪರೀಕ್ಷಿಸಲಾಗಿದ್ದು, 1663 ಜನರ ವರದಿ ನೆಗೆಟಿವ್ ಬಂದಿವೆ. 41 ಜನರ ವರದಿ ಪಾಸಿಟಿವ್ ಆಗಿದ್ದು, ಇನ್ನೂ 253 ಜನರ ವರದಿ ಬರಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.