ಕರ್ನಾಟಕ

karnataka

ETV Bharat / state

ಕೇಂದ್ರ ಬಸ್​ ನಿಲ್ದಾಣದಲ್ಲೇ ಕೊರೊನಾ ತಪಾಸಣೆ: ಸ್ಕ್ಯಾನಿಂಗ್​ ನಂತರವೇ ಬಸ್​ಗೆ ಎಂಟ್ರಿ - ವಿಜಯಪುರದ ಕೇಂದ್ರ ಬಸ್​​ ನಿಲ್ದಾಣ

ವಿಜಯಪುರದ ಕೇಂದ್ರ ಬಸ್​​ ನಿಲ್ದಾಣದಲ್ಲಿ ಪರ ಜಿಲ್ಲೆಗೆ ತೆರಳುವ ಪ್ರಯಾಣಿಕರನ್ನು ಕೊರೊನಾ ವೈರಸ್​ ತಪಾಸಣೆಗೆ ಒಳಪಡಿಸಲಾಗಿದ್ದು, ಸ್ಕ್ಯಾನಿಂಗ್​ ನಡೆಸಿದ ನಂತರವೇ ಬಸ್ಸಿನಲ್ಲಿ ಪ್ರಯಾಣಿಸಲು ಅನುಮತಿ ನೀಡಲಾಗುತ್ತಿದೆ.

Corona inspection
ಪ್ರಯಾಣಿಕರ ಆರೋಗ್ಯ ತಪಾಸಣೆ

By

Published : Jun 9, 2020, 2:25 PM IST

ವಿಜಯಪುರ:ಬೇರೆ ಜಿಲ್ಲೆಗಳಿಗೆ ತೆರಳುವ ಪ್ರಯಾಣಿಕರಿಗೆ ಸ್ಕ್ಯಾನಿಂಗ್ ಮಾಡುವ ಮೂಲಕ ಕೊರೊನಾ ವೈರಸ್​ ತಪಾಸಣೆಯನ್ನು ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಮಾಡಲಾಗುತ್ತಿದೆ.

ಪ್ರಯಾಣಿಕರ ಆರೋಗ್ಯ ತಪಾಸಣೆ

ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 200 ರ ಗಡಿ ದಾಟಿದ ಪರಿಣಾಮ ಹಾಗೂ ಹೆಚ್ಚಾಗಿ ಮಹಾರಾಷ್ಟ್ರ ರಾಜ್ಯದಿಂದ‌ ವಿಜಯಪುರ ಜಿಲ್ಲೆಗೆ ಆಗಮಿಸಿದವರಲ್ಲಿ ಸೋಂಕು ಪತ್ತೆಯಾಗುತ್ತಿರುವುರಿಂದ, ಆರೋಗ್ಯ ಇಲಾಖೆ ಸಿಬ್ಬಂದಿ ದೂರದ ಊರುಗಳಿಗೆ ತೆರಳುವ ಪ್ರಯಾಣಿಕರ ಮಾಹಿತಿ ಪಡೆದು, ಸ್ಕ್ಯಾನಿಂಗ್ ‌ಮಾಡುತ್ತಿದ್ದಾರೆ. ‌‌ಇದೇ ವೇಳೆ ಪ್ರಯಾಣಿಕರಿಗೆ ಕಡ್ಡಾಯಾಗಿ ಮಾಸ್ಕ್ ಧರಿಸಿವಂತೆ ಸೂಚನೆ ನೀಡಲಾಗುತ್ತಿದೆ.

ಇನ್ನು ಬೇರೆ ಜಿಲ್ಲೆಗಳಿಂದ ಆಗಮಿಸಿದ ಪ್ರಯಾಣಿಕರು ಸಹ ಬಸ್ ನಿಲ್ದಾಣದಲ್ಲಿ ಕೊರೊನಾ ಟೆಸ್ಟ್​ಗೆ ಒಳಗಾಗುತ್ತಿದ್ದಾರೆ. ಲಾಕ್​ಡೌನ್​ ಸಡಿಲಿಕೆಯಿಂದಾಗಿ ವಿಜಯಪುರದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚಾಗದಿರಲಿ ಎಂಬ ಕಾರಣಕ್ಕೆ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ.

ABOUT THE AUTHOR

...view details