ಕರ್ನಾಟಕ

karnataka

ETV Bharat / state

ವಿಜಯಪುರದಲ್ಲಿ ಇಂದು 86 ಜನರಿಗೆ ಕೋವಿಡ್​ ದೃಢ - coronavirus news

ವಿಜಯಪುರ ಜಿಲ್ಲೆಯಲ್ಲಿ ಇಂದು ಒಂದೇ ದಿನ 86 ಕೊರೊನಾ ಪ್ರಕರಣಗಳು ದಾಖಲಾಗಿದ್ದು, 84 ಜನ ಕೋವಿಡ್​ ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ವಿಜಯಪುರದಲ್ಲಿ ಒಂದೇ ದಿನ 86 ಜನರಲ್ಲಿ ಕೋವಿಡ್​ ದೃಢ
ವಿಜಯಪುರದಲ್ಲಿ ಒಂದೇ ದಿನ 86 ಜನರಲ್ಲಿ ಕೋವಿಡ್​ ದೃಢ

By

Published : Jul 13, 2020, 11:52 PM IST

ವಿಜಯಪುರ: ಜಿಲ್ಲೆಯಲ್ಲಿ ಇಂದು ಒಂದೇ ದಿನ 86 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಸೋಂಕಿತರ ಸಂಖ್ಯೆ 844ಕ್ಕೆ ಏರಿಕೆಯಾಗಿದೆ.

ಇಂದು ಸೋಂಕು ತಗುಲಿದವರ ಪೈಕಿ 54 ಪುರುಷರು, 22 ಮಹಿಳೆಯರು, ನಾಲ್ವರು ಬಾಲಕರು, ಮೂವರು ಬಾಲಕಿಯರು, ಇಬ್ಬರು ಯುವಕರು ಹಾಗೂ ಓರ್ವ ಯುವತಿ ಸೇರಿದ್ದಾರೆ. ಜಿಲ್ಲೆಯ 14 ಪೊಲೀಸರು, 18 ಮಹಾನಗರ ಪಾಲಿಕೆ ಪೌರ ಕಾರ್ಮಿಕರು, ಸಿಬ್ಬಂದಿಗೂ ಸಹ ಕೊರೊನಾ ದೃಢಪಟ್ಟಿದೆ.

ಇಂದು 84 ಜನ ಕೋವಿಡ್​ ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇದುವರೆಗೆ ಒಟ್ಟು 574 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 254 ಜನ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು 35,911 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. 31,529 ಜನರ ವರದಿ ನೆಗಟಿವ್ ಬಂದಿದೆ. 844 ಜನರ ವರದಿ ಪಾಸಿಟಿವ್ ಬಂದಿದೆ. ಇನ್ನೂ 3,598 ಜನರ ಗಂಟಲು ದ್ರವದ ವರದಿ ಬರಬೇಕಾಗಿದೆ. 1,123 ಜನ ಹೋಂ ಕ್ವಾರಂಟೈನ್​​ನಲ್ಲಿದ್ದಾರೆ.

ABOUT THE AUTHOR

...view details