ಮುದ್ದೇಬಿಹಾಳ:ಕೊರೊನಾ ಎರಡನೇ ಅಲೆ ಹೆಚ್ಚಾಗಿದ್ದು, ರೈತರು ಬೆಳೆದ ತರಕಾರಿಯ ಬೆಲೆಯೂ ಪಾತಾಳಕ್ಕೆ ಕುಸಿದು ರೈತರನ್ನು ಕಂಗಾಲಾಗುವಂತೆ ಮಾಡಿದೆ.
ಪಟ್ಟಣದ ತರಕಾರಿ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಆವಕವಾಗಿದ್ದ ನುಗ್ಗೆಕಾಯಿ, ಟೊಮ್ಯಾಟೋ ದರ ಪಾತಾಳಕ್ಕೆ ಕುಸಿದಿದ್ದು, ರೈತರನ್ನು ಚಿಂತಾಕ್ರಾಂತರನ್ನಾಗಿಸಿದೆ. ತಿಂಗಳ ಹಿಂದಷ್ಟೇ ಅಲ್ಪ ಲಾಭ ಮಾಡಿಕೊಟ್ಟಿದ್ದ ತರಕಾರಿ ಬೆಲೆ ಇದೀಗ ದಿಢೀರ್ ಕುಸಿತದಿಂದ ರೈತನಿಗೆ ಸಂಕಷ್ಟ ಎದುರಾಗಿದೆ.
ಕೊರೊನಾ ಎಫೆಕ್ಟ್: ತರಕಾರಿ ಬೆಲೆ ದಿಢೀರ್ ಕುಸಿತ... ರೈತರು ಮಾರುಕಟ್ಟೆಗೆ ತಂದಿರುವ ತರಕಾರಿಗೆ ಸೂಕ್ತ ಬೆಲೆ ಸಿಗದೇ ಇರುವುದರಿಂದ ನಿರಾಸೆ ಅನುಭವಿಸುವ ಸ್ಥಿತಿ ಎದುರಾಗಿದೆ. ಎಲ್ಲ ದರಗಳೂ ಕುಸಿಯುತ್ತಿದ್ದು ಮಾರಾಟಗಾರರು ಮಾತ್ರ ಇದರ ಲಾಭ ಮಾಡಿಕೊಳ್ಳುತ್ತಿದ್ದಾರೆ. ಆಲೂರ ಗ್ರಾಮದಲ್ಲಿ ಆರು ಎಕರೆ ನುಗ್ಗೆಕಾಯಿ ಬೆಳೆದಿದ್ದೇನೆ. ತಾಲೂಕಿನಲ್ಲಿ ಅಂದಾಜು 100-150 ಎಕರೆ ಪ್ರದೇಶದಲ್ಲಿ ನುಗ್ಗೆಕಾಯಿಯನ್ನು ರೈತರು ಬೆಳೆದಿದ್ದಾರೆ. ಇಂದು ಮಾರುಕಟ್ಟೆಯಲ್ಲಿ 2 ರೂಪಾಯಿಗೆ ಕೆಜಿಯಂತೆ ಮಾರಾಟವಾಗಿದೆ. ಕೊರೊನಾ ಹಾವಳಿ ಮಧ್ಯೆ ನಮ್ಮ ಬೆಳೆಗೆ ಸರಿಯಾದ ಬೆಲೆಯೂ ಸಿಗುತ್ತಿಲ್ಲ. ರೈತರಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ರೈತ ಶಿವಕುಮಾರ ಹಿರೇಗೌಡರ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಓದಿ: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ವಾರದಲ್ಲಿ ಒಂದು ದಿನ ಮಾತ್ರ ವ್ಯಾಪಾರ ವಹಿವಾಟು