ಕರ್ನಾಟಕ

karnataka

ETV Bharat / state

ಕೊರೊನಾ ಎಫೆಕ್ಟ್.. ದುಡಿಮೆ ಇಲ್ಲದೇ ಆರ್ಥಿಕ ಸಂಕಷ್ಟದಲ್ಲಿ ಹಮಾಲರು.. - ಕೊರೊನಾ ಎಫೆಕ್ಟ್

ಪ್ರತಿದಿನ ಮಾರುಕಟ್ಟೆಗೆ ಬಂದು ದುಡಿಮೆವಿಲ್ಲದೆ ರಸ್ತೆ ಬದಿಯಲ್ಲಿ ಕುಳಿತು ಊಟ ಮಾಡಿಕೊಂಡು, ಮನೆಗೆ ಹೋದ್ರೆ ಬದುಕುವುದು ಹೇಗೆ ಎಂಬ ಚಿಂತೆಯಲ್ಲಿ ಕೂಲಿ ಕಾರ್ಮಿಕರಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಾರ್ಮಿಕರಿಗೆ ಘೋಷಿಸಿದ ಪರಿಹಾರ ತಲುಪಿಲ್ಲ ಎಂಬ ಆರೋಪ ಮಾಡುತ್ತಿದ್ದಾರೆ..

corona effect on Workers
ದುಡಿಮೆ ಇಲ್ಲದೇ ಆರ್ಥಿಕ ಸಂಕಷ್ಟದಲ್ಲಿರುವ ಕಾರ್ಮಿಕರು

By

Published : Jul 21, 2020, 8:12 PM IST

ವಿಜಯಪುರ :ಹಮಾಲಿ ಕೆಲಸ ಮಾಡಿಕೊಂಡು ಬದುಕು ಕಂಡುಕೊಂಡಿದ್ದ ಕೂಲಿ ಕಾರ್ಮಿಕರು, ಸದ್ಯ ದುಡಿಮೆಗಾಗಿ ಪರದಾಟ ನಡೆಸುವಂತಾಗಿದೆ. ಕಳೆದ ಮೂರ್ನಾಲ್ಕು ತಿಂಗಳಿಂದ ನಗರದ ಎಪಿಎಂಪಿ‌ ಮಾರುಕಟ್ಟೆಯಲ್ಲಿ ಮೂಟೆ ಹೊತ್ತು,‌ ಪ್ರತಿದಿನ ₹500 ರಿಂದ ಒಂದು ಸಾವಿರ ರೂ. ಸಂಪಾದನೆ ಮಾಡುವ ಕೈಗಳಿಗೆ ಸದ್ಯ‌ ಕೊರೊನಾ ಬಿಸಿ ಮುಟ್ಟಿಸಿದೆ.

ಸೆಸ್ ಬೆಲೆ ಕಡಿತಗೊಳಿಸಲು ಎಂಪಿಎಂಸಿ ಕಮಿಷನ್ ಏಜಂಟರು ಅನಿರ್ದಿಷ್ಟಾವಧಿವರೆಗೆ ಸ್ವಯಂ ಪ್ರೇರಿತವಾಗಿ ಅಂಗಡಿಗಳಿಗೆ ಬೀಗ ಹಾಕಿರುವುದರಿಂದ, ಹಮಾಲಿಗಳು ಕೆಲಸವಿಲ್ಲದೆ ಕುಟುಂಬ ನಿರ್ವಹಣೆ ಮಾಡಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಎಪಿಎಂಪಿ ಮಾರುಕಟ್ಟೆಯಲ್ಲಿ ಒಟ್ಟು 500ಕ್ಕೂ ಅಧಿಕ ಜನರು ಹಮಾಲಿ ವೃತ್ತಿ ನಂಬಿಕೊಂಡು, ಕಳೆದ ಹಲವು ವರ್ಷಗಳಿಂದ ಜೀವನ ನಡೆಸಿಕೊಂಡು ಬಂದಿದ್ದಾರೆ. ಇತ್ತ ಕೊರೊನಾ‌ ಭೀತಿಯಿಂದ ಖರೀದಾರರು ಹಾಗೂ ರೈತರು ಮಾರುಕಟ್ಟೆಯತ್ತ ಮುಖ ಮಾಡದಿರೋದು ಕೂಲಿ ಕಾರ್ಮಿಕರ ಉದ್ಯೋಗಕ್ಕೆ ಕೊಕ್ಕೆ ಬಿದ್ದಂತಾಗಿದೆ.

ದುಡಿಮೆ ಇಲ್ಲದೇ ಆರ್ಥಿಕ ಸಂಕಷ್ಟದಲ್ಲಿರುವ ಕಾರ್ಮಿಕರು

ಪ್ರತಿದಿನ ಮಾರುಕಟ್ಟೆಗೆ ಬಂದು ದುಡಿಮೆವಿಲ್ಲದೆ ರಸ್ತೆ ಬದಿಯಲ್ಲಿ ಕುಳಿತು ಊಟ ಮಾಡಿಕೊಂಡು, ಮನೆಗೆ ಹೋದ್ರೆ ಬದುಕುವುದು ಹೇಗೆ ಎಂಬ ಚಿಂತೆಯಲ್ಲಿ ಕೂಲಿ ಕಾರ್ಮಿಕರಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಾರ್ಮಿಕರಿಗೆ ಘೋಷಿಸಿದ ಪರಿಹಾರ ತಲುಪಿಲ್ಲ ಎಂಬ ಆರೋಪ ಮಾಡುತ್ತಿದ್ದಾರೆ. ಕುಟುಂಬ ನಿರ್ವಹಣೆ ಮಾಡಲು ಅಂಗಡಿ ಮಾಲೀಕರ ಬಳಿ ಹಣ ಕೇಳಿದ್ರೂ, ಅಂಗಡಿಗಳು ಬಂದ್ ಇವೆ ಎನ್ನುತ್ತಿದ್ದಾರೆ. ಇತ್ತ ಕೂಲಿ ಕಾರ್ಮಿಕರು ಬೇಗ ಮಾರುಕಟ್ಟೆ ಆರಂಭಿಸುವಂತೆ ಒತ್ತಾಯಿಸುತ್ತಿದ್ದಾರೆ.

ಕೊರೊನಾ ಭೀತಿ ಹಾಗೂ ಸ್ವಯಂ ಪ್ರೇರಿತವಾಗಿ ಅಂಗಡಿಗಳು ಬಂದ್ ಆಗಿರೋದಕ್ಕೆ ಹಮಾಲಿ ವೃತ್ತಿ ನಂಬಿದ ಜನರ ಬದುಕು ಸಂಕಷ್ಟಕ್ಕೆ ಸಿಲುಕಿದೆ.

ABOUT THE AUTHOR

...view details