ವಿಜಯಪುರ: ಪ್ರವಾಸೋದ್ಯಮವನ್ನೇ ನಂಬಿದ್ದ ಸಾಕಷ್ಟು ವ್ಯಾಪಾರಿಗಳ ಬದುಕು ಇನ್ನೂ ಕೆಟ್ಟ ಸ್ಥಿತಿಯಲ್ಲೇ ಮುಂದುವರೆದಿದೆ. ಲಾಕ್ಡೌನ್ ಅನ್ಲಾಕ್ ಬಳಿಕ ವೀಕ್ಷಣೆಗೆ ಅವಕಾಶ ಮಾಡಿ ಕೊಟ್ಟಿದ್ದರೂ ವಿಶ್ವವಿಖ್ಯಾತ ಗೋಳ ಗುಮ್ಮಟ ಪ್ರವಾಸಿಗರಿಲ್ಲದೆ ಸೊರಗುತ್ತಿದೆ. ಈ ಮೂಲಕ ಜಿಲ್ಲೆ ಸಹಜ ಸ್ಥಿತಿಗೆ ಮರಳುತ್ತಿದ್ದರೂ ಪ್ರವಾಸೋದ್ಯಮಕ್ಕೆ ಮಾತ್ರ ಮಂಕು ಕವಿದಿದೆ.
ಇದನ್ನೂ ಓದಿ...ಕಲಬುರಗಿಯಲ್ಲಿ ವಿಮಾನ ಹಾರಾಯ್ತು, ಗುಮ್ಮಟನಗರಿಯಲ್ಲಿ ಲೋಹದ ಹಕ್ಕಿ ಹಾರಾಟ ಯಾವಾಗ?
ಗೋಳ ಗುಮ್ಮಟ ಅಲ್ಲದೆ ಆಲಮಟ್ಟಿ ಉದ್ಯಾನವನ, ಬಿಜಾಪುರ ಕೋಟೆ, ಐತಿಹಾಸಿಕ ಸ್ಮಾರಕ ಸೇರಿದಂತೆ ಜಿಲ್ಲೆಯ ಪ್ರವಾಸಿ ತಾಣಗಳ ವೀಕ್ಷಣೆಗೆ ದೇಶ-ವಿದೇಶಗಳಿಂದ ಬರುತ್ತಿದ್ದ ಪ್ರವಾಸಿಗರು ಕೊರೊನಾ ಭೀತಿಯಿಂದಾಗಿ ವಿಜಯಪುರದತ್ತ ಮುಖ ಮಾಡುತ್ತಿಲ್ಲ. ಪ್ರಸ್ತುತ ಪ್ರವಾಸಿ ತಾಣಗಳ ವೀಕ್ಷಣೆಗೆ ಸ್ಥಳೀಯರು ಮಾತ್ರ ಬರುತ್ತಿದ್ದಾರೆ. ಅಂತಾರಾಷ್ಟ್ರೀಯ ವಿಮಾನಯಾನ ಸೇವೆ ಆರಂಭವಾಗದ ಕಾರಣ ವಿದೇಶಿ ಪ್ರವಾಸಿಗರ ಬರುವಿಕೆ ಸಾಧ್ಯವಾಗುತ್ತಿಲ್ಲ.
ಪ್ರವಾಸೋದ್ಯಮ ಕುರಿತು ಅಭಿಪ್ರಾಯ ಮುಖ್ಯವಾಗಿ ವಿಜಯಪುರ ನಗರದ ರಸ್ತೆಗಳ ದುರಸ್ತಿಗೆ ಜಿಲ್ಲಾಧಿಕಾರಿಗಳು ಮಹಾನಗರ ಪಾಲಿಕೆಗೆ ಖಡಕ್ ಸಂದೇಶ ರವಾನಿಸಿದ್ದರೂ ಪ್ರಯೋಜನವಾಗಿಲ್ಲ. ಪ್ರವಾಸೋದ್ಯಮ ಚೇತರಿಕೆ ಕಂಡರೆ ಪ್ರವಾಸಿ ತಾಣಗಳ ವ್ಯಾಪಾರಿಗಳ ಆದಾಯಕ್ಕೆ ದಾರಿ ಮಾಡಿಕೊಡುವ ವ್ಯವಸ್ಥೆ ಜಿಲ್ಲಾಡಳಿತ ಮಾಡುತ್ತಿದೆ. ಹೀಗಾಗಿ ಪ್ರೇಕ್ಷಣೀಯ ಸ್ಥಳಗಳತ್ತ ಪ್ರವಾಸಿಗರನ್ನು ಸೆಳೆಯಲು ಜಿಲ್ಲಾಡಳಿತ ನಾನಾ ಕಸರತ್ತು ಮಾಡುತ್ತಿದೆ.