ಮುದ್ದೇಬಿಹಾಳ: ಕೊರೊನಾ ವೈರಸ್ ಕಳೆದ ಎರಡೂವರೆ ತಿಂಗಳಿನಿಂದ ದೇಶದಲ್ಲಿ ಆರ್ಥಿಕ ಚಟುವಟಿಕೆಗಳನ್ನು ಅಕ್ಷರಶಃ ಸ್ತಬ್ಧಗೊಳಿಸಿದೆ. ಅಲ್ಲದೆ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಕಾರ ಹುಣ್ಣಿಮೆಯ ಕರಿ ಹರಿಯುವ ಕಾರ್ಯಕ್ರಮದ ಮೇಲೂ ಕೊರೊನಾ ಕರಿ ನೆರಳು ಆವರಿಸಿದೆ.
ಕಾರ ಹುಣ್ಣಿಮೆ ಮೇಲೂ ಕೊರೊನಾ ಕರಿ ನೆರಳು - ಮುದ್ದೇಬಿಹಾಳ ಸುದ್ದಿ
ಉತ್ತರ ಕರ್ನಾಟಕ ಭಾಗದಲ್ಲಿ ಆಚರಿಸಲಾಗುತ್ತಿದ್ದ ಕಾರ ಹುಣ್ಣಿಮೆ ಹಬ್ಬವನ್ನು ಕೊರೊನಾ ಪರಿಣಾಮದಿಂದಾಗಿ ಈ ಬಾರಿ ಸರಳವಾಗಿ ಆಚರಿಸಲಾಗುತ್ತಿದೆ.

ಕಾರ ಹುಣ್ಣಿಮೆಯ ಮೇಲೂ ಕೊರೊನಾ ಕರಿ ನೆರಳು
ರೈತರು ತಮ್ಮ ಎತ್ತುಗಳನ್ನು ಶೃಂಗರಿಸಿ ಕಾರ ಹುಣ್ಣಿಮೆಯ ದಿನ ಕರಿ ಹರಿಯುವ ಸಂಪ್ರದಾಯ ನಡೆಸುತ್ತಾರೆ. ಆದರೆ ಈ ವರ್ಷ ಕೊರೊನಾ ವೈರಸ್ ಹಾವಳಿಯಿಂದಾಗಿ ಬಹುತೇಕ ಎಲ್ಲಾ ಊರುಗಳಲ್ಲೂ ಸರಳವಾಗಿ ಕರಿ ಹರಿಯುವ ಆಚರಣೆ ನಡೆಸಲು ರೈತಾಪಿ ವರ್ಗದವರು ಮುಂದಾಗುತ್ತಿದ್ದಾರೆ.
ಇನ್ನು ಪಟ್ಟಣದಲ್ಲಿ ಅಂದಾಜು 10-15 ಹಗ್ಗದ ಅಂಗಡಿಗಳಿವೆ. ಇಲ್ಲಿ ಎತ್ತುಗಳಿಗೆ ಬೇಕಾದ ಮಗಡಾ, ಹಗ್ಗ, ಮೂಗದಾಣಿ, ಬಾರುಕೋಲು, ಕೊಮ್ಮಣಸು, ರಿಬ್ಬನ್, ಬಣ್ಣ, ಘಂಟೆ, ಗೆಜ್ಜೆ ಮೊದಲಾದ ಸಾಮಗ್ರಿಗಳು ದೊರೆಯುತ್ತವೆ. ಈ ಬಾರಿ ಕಾರ ಹುಣ್ಣಿಮೆ ಜೋರಾಗಿ ನಡೆಯದ ಕಾರಣ ಈ ಅಂಗಡಿಗಳೂ ಕೂಡ ಜನರಿಲ್ಲದೆ ಭಣಗುಡುತ್ತಿವೆ.
Last Updated : Jun 4, 2020, 7:54 AM IST