ವಿಜಯಪುರ:ಮಹಾಮಾರಿ ಕೊರೊನಾ ವೈರಸ್ ಕಾಯಿಲೆ ತಡೆಗಟ್ಟುವ ಸಲುವಾಗಿ ಸಾರ್ವಜನಿಕರು ಮಹಾ ಮೃತ್ಯುಂಜಯ ಹೋಮ ನೆರವೇರಿಸಿದ್ದಾರೆ.
ಕೊರೊನಾ ತಡೆಗೆ ಮಹಾ ಮೃತ್ಯುಂಜಯ ಹೋಮ - special worship in Sindagi
ಕೊರೊನಾ ಭೀತಿ ಎಲ್ಲೆಡೆ ಹಬ್ಬುತ್ತಿದ್ದು, ಸಿಂದಗಿ ಪಟ್ಟಣದ ಜನತೆ ಶ್ರೀ ಕಾಳಿಕಾದೇವಿಯ ಮೊರೆ ಹೋಗಿದ್ದಾರೆ. ಸಾರ್ವಜನಿಕರು ಶ್ರೀ ಕಾಳಿಕಾದೇವಿ ದೇವಸ್ಥಾನದಲ್ಲಿ ದೇವಿಗೆ ಪ್ರಾರ್ಥನೆ ಸಲ್ಲಿಸುವ ಮೂಲಕ ವಿಶೇಷ ಯಾಗ ನಡೆಸಿದರು.
ಕೊರೊನಾ ತಡೆಗೆ ಮಹಾ ಮೃತ್ಯುಂಜಯ ಹೋಮ
ಸಿಂದಗಿ ಪಟ್ಟಣದ ಶ್ರೀ ಕಾಳಿಕಾದೇವಿ ದೇವಸ್ಥಾನದಲ್ಲಿ ಪಟ್ಟಣದ ಸಮಸ್ತ ಭಕ್ತಾದಿಗಳು ಹಾಗೂ ಗ್ರಾಮಸ್ಥರು ಪಾಲ್ಗೊಂಡು ಕೂರೊನಾ ವೈರಸ್ ಮನುಕುಲಕ್ಕೆ ಕಂಟಕವಾಗದಿರಲಿ ಹಾಗೂ ಜಿಲ್ಲೆಗೆ ಕೋವಿಡ್ 19 ಬಾರದಿರಲಿ ಎಂದು ಸಾರ್ವಜನಿಕರು ದೇವಿಗೆ ಪ್ರಾರ್ಥನೆ ಸಲ್ಲಿಸುವ ಮೂಲಕ ಕಾಳಿಕಾ ದೇವಿಗೆ ವಿಶೇಷ ಯಾಗ ನಡೆಸಿದರು.
ಇನ್ನೂ ದೇಶಾದ್ಯಂತ ಲಾಕ್ಡೌನ್ ಆಗಿ ಇಂದು ಮೂರನೇ ದಿನ. ಸಿಂದಗಿ ಪಟ್ಟಣದ ಜನರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕರೆಗೆ ಸ್ಪಂದಿಸಿದ್ದಾರೆ. ಇಡೀ ಪಟ್ಟಣವೇ ಸ್ತಬ್ಧವಾಗಿದ್ದು, ಕೊರೊನಾ ವೈರಸ್ ತಡೆಗೆ ಜನರು ದೇವರ ಮೊರೆ ಹೋಗಿದ್ದಾರೆ.