ಕರ್ನಾಟಕ

karnataka

ವಿಜಯಪುರದಲ್ಲಿ 22 ಮಂದಿಗೆ ತಗುಲಿದ ಸೋಂಕು.. ನಿಯಮ ಪಾಲಿಸದಿದ್ರೆ 250 ರೂ. ದಂಡದ ಎಚ್ಚರಿಕೆ..

By

Published : Jan 8, 2022, 7:09 PM IST

ಸಾರ್ವಜನಿಕ ಸ್ಥಳಗಳಲ್ಲಿ, ಕೆಲಸದ ಸ್ಥಳಗಳಲ್ಲಿ ಮತ್ತು ಪ್ರಯಾಣದ ವೇಳೆ ಮಾಸ್ಕ್​ ಧರಿಸುವುದು ಕಡ್ಡಾಯವಾಗಿದೆ. ಮಾಸ್ಕ್ ಸರಿಯಾಗಿ ಧರಿಸದ್ದಿದ್ದಲ್ಲಿ ಮಹಾನಗರ ಪಾಲಿಕೆ ಪ್ರದೇಶದಲ್ಲಿ 250 ರೂ. ಹಾಗೂ ಇತರೆಡೆ 100 ರೂಪಾಯಿ ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿದ್ದಾರೆ..

corona
ಕೋವಿಡ್

ವಿಜಯಪುರ :ಜಿಲ್ಲೆಯಲ್ಲಿಂದು 22 ಜನರಿಗೆ ಕೊರೊನಾ ಸೋಂಕು ತಗುಲಿದೆ. ಒಟ್ಟು ಸೋಂಕಿತರ ಸಂಖ್ಯೆ 105ಕ್ಕೆ ಏರಿಕೆಯಾಗಿದೆ. 14 ಸೋಂಕಿತರು ಹೋಂ ಐಸೋಲೇಷಲ್​ನಲ್ಲಿದ್ದಾರೆ. ಇಂದು ಆಸ್ಪತ್ರೆಯಿಂದ ಒಬ್ಬರು ಬಿಡುಗಡೆಯಾಗಿದ್ದಾರೆ. ಇಂದು 2,613 ಜನರಿಗೆ ಟೆಸ್ಟ್​ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಸಹಾಯವಾಣಿ ಆರಂಭ :ಕೋವಿಡ್ ಹಾಗೂ ಒಮಿಕ್ರಾನ್​ ವೈರಸ್ ಹಿನ್ನೆಲೆ ರಾಜ್ಯಾದ್ಯಂತ ಈಗಾಗಲೇ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಅದರಂತೆ ಜಿಲ್ಲೆಯಲ್ಲಿ ಸಾರ್ವಜನಿಕರು ವೈದ್ಯಕೀಯ ಹಾಗೂ ಆಕ್ಸಿಜನ್ ಪೂರೈಕೆ ಹಾಗೂ ಕೋವಿಡ್​ ಇತರೆ ಮಾಹಿತಿಗಾಗಿ ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ತಾಲೂಕು ಆರೋಗ್ಯ ಕೇಂದ್ರಗಳಲ್ಲಿ ಸಹಾಯವಾಣಿ ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ. ಸುನಿಲ್‌ಕುಮಾರ್ ಕುಮಾರ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ದೂರವಾಣಿ ಸಂಖ್ಯೆ 1077, 08352- 222101, 222102, 22161, ಬಸವನಬಾಗೇವಾಡಿ ತಾಲೂಕು ಆಸ್ಪತ್ರೆ ಸಂಖ್ಯೆ- 82775044283 ಆಗಿದೆ. ಮುದ್ದೇಬಿಹಾಳ ತಾಲೂಕು ಆಸ್ಪತ್ರೆ ಸಂಖ್ಯೆ-8277504283, ಇಂಡಿ ತಾಲೂಕಾಸ್ಪತ್ರೆ ಸಂಖ್ಯೆ-8277504365 ಹಾಗೂ ಸಿಂದಗಿ ತಾಲೂಕು ಆಸ್ಪತ್ರೆ - 8488222014 ಸಂಖ್ಯೆಗೆ ಅಗತ್ಯವಿದ್ದವರು ಕರೆ ಮಾಡಿ ಸಹಾಯ ಪಡೆಯಬಹುದು ಎಂದು ಅವರು ತಿಳಿಸಿದ್ದಾರೆ.

ದಂಡ ವಸೂಲಿಗೆ ಸೂಚನೆ :ಜಿಲ್ಲೆಯಲ್ಲಿ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯ. ಕೋವಿಡ್​ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಸುನಿಲ್ ಕುಮಾರ್ ತಿಳಿಸಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ, ಕೆಲಸದ ಸ್ಥಳಗಳಲ್ಲಿ ಮತ್ತು ಪ್ರಯಾಣದ ವೇಳೆ ಮಾಸ್ಕ್​ ಧರಿಸುವುದು ಕಡ್ಡಾಯವಾಗಿದೆ. ಮಾಸ್ಕ್ ಸರಿಯಾಗಿ ಧರಿಸದ್ದಿದ್ದಲ್ಲಿ ಮಹಾನಗರ ಪಾಲಿಕೆ ಪ್ರದೇಶದಲ್ಲಿ 250 ರೂ. ಹಾಗೂ ಇತರೆಡೆ 100 ರೂಪಾಯಿ ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಬಿಎಸ್​ವೈ ಮೂಗಿಗೆ ತುಪ್ಪ ಸವರಿ, ಕಿವಿ ಮೇಲೆ ಹೂ ಇಟ್ಟು ಮನೇಲಿ ಕೂತಿದ್ದಾರೆ: ವಾಲ್ಮೀಕಿ ಶ್ರೀ ಗುಡುಗು

ABOUT THE AUTHOR

...view details