ಕರ್ನಾಟಕ

karnataka

ETV Bharat / state

ವಿಜಯಪುರ: ಎರಡು ಹಸುಳೆಗಳು ಸೇರಿ 249 ಮಕ್ಕಳಿಗೆ ವಕ್ಕರಿಸಿದ ಮಹಾಮಾರಿ - ವಿಜಯಪುರದಲ್ಲಿ ಕೊರೊನಾ ಕೇಸ್ ಹೆಚ್ಚಳ

ಚಾಮರಾಜನಗರ ಜಿಲ್ಲೆಯಲ್ಲಿ ಕೊರೊನಾ ಏರುಗತಿ ಕಂಡಿದೆ. ಇಂದು ಹೊಸದಾಗಿ 268 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 1010ಕ್ಕೆ ಏರಿಕೆಯಾಗಿದೆ‌.

vijayapura
ವಿಜಯಪುರ

By

Published : Jan 19, 2022, 10:57 PM IST

Updated : Jan 19, 2022, 11:09 PM IST

ವಿಜಯಪುರ:ಜಿಲ್ಲೆಯಲ್ಲಿ ಮಕ್ಕಳಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ ಹೆಚ್ಚುತ್ತಲೇ ಇದೆ. ಇಬ್ಬರು ಹಸುಳೆಗಳು ಸೇರಿ 249 ಮಕ್ಕಳಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.

ಮೂರನೇ ಅಲೆ ಆರಂಭವಾದ ಮೇಲೆ ಜನವರಿ 1ರಿಂದ ಇಲ್ಲಿಯವರೆಗೆ 249 ಮಕ್ಕಳಿಗೆ ಕೊರೊನಾ ಸೊಂಕು ತಗುಲಿದೆ. 1ವರ್ಷದ ಒಳಗಿನ ಇಬ್ಬರು ಹಸುಳೆಗಳಿಗೆ, 2 ರಿಂದ 5ವರ್ಷದ ಒಳಗಿನ ಏಳು ಮಕ್ಕಳಿಗೆ, 6ರಿಂದ 10ವರ್ಷದ ಒಳಗಿನ 21, 11ರಿಂದ15 ವರ್ಷದ ಒಳಗಿನ 96 ಮಕ್ಕಳಿಗೆ, 16ರಿಂದ18ವರ್ಷದ ಒಳಗಿನ 58 ಹಾಗೂ 19ರಿಂದ21ವರ್ಷದ ಒಳಗಿನ 65 ಸೇರಿ ಇಲ್ಲಿಯವರೆಗೆ 249 ಮಕ್ಕಳು ಕೊರೊನಾ ಪಾಸಿಟಿವ್​ನಿಂದ ಬಳಲುತ್ತಿದ್ದಾರೆ.‌

ಇಂದು 163 ಜನರಿಗೆ ಪಾಸಿಟಿವ್:ಇಂದು ಜಿಲ್ಲೆಯ 163 ಜನರಲ್ಲಿ ಪಾಸಿಟಿವ್ ದೃಢಪಟ್ಟಿದೆ. ಕೊರೊನಾಗೆ ಓರ್ವ ರೋಗಿ ಮೃತಪಟ್ಟಿದ್ದಾರೆ. 67ಜನ ಗುಣ ಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಟ್ಟು ಇಲ್ಲಿಯವರೆಗೆ 37,231ಜನರಲ್ಲಿ ಪಾಸಿಟಿವ್ ಧೃಢಪಟ್ಟಿತ್ತು. 9, 20,417ಜನರನ್ನು ಕೊರೊನಾ ಟೆಸ್ಟ್ ಗೆ ಒಳಪಡಿಸಲಾಗಿದೆ. ಇನ್ನೂ 2,072ಜನರ ಸ್ವ್ಯಾಬ್ ಟೆಸ್ಟ್ ವರದಿ ಬರಬೇಕಾಗಿದೆ. ಇಲ್ಲಿಯವರೆಗೆ 497ಜನ ಕೋವಿಡ್​ಗೆ ಬಲಿಯಾಗಿದ್ದಾರೆ.

ಚಾಮರಾಜನಗರದಲ್ಲಿ ಹೆಚ್ಚಿದ ಕೊರೊನಾ: ಇಂದು 268 ಕೇಸ್ ಪತ್ತೆ, ಸಾವಿರ ದಾಟಿದ ಸಕ್ರಿಯ ಪ್ರಕರಣ

ಚಾಮರಾಜನಗರ ಜಿಲ್ಲೆಯಲ್ಲಿ ಕೊರೊನಾ ಏರುಗತಿ ಕಂಡಿದೆ. ಇಂದು ಹೊಸದಾಗಿ 268 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 1010ಕ್ಕೆ ಏರಿಕೆಯಾಗಿದೆ‌.

ಇಂದು 151 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದು, 572 ಮಂದಿ ಹೋಂ ಐಸೋಲೇಷನ್​ನಲ್ಲಿದ್ದಾರೆ. ಬುಧವಾರ ಮೂರು ಸಾವಿರಕ್ಕೂ ಅಧಿಕ ಮಂದಿಗೆ ಕೋವಿಡ್ ಟೆಸ್ಟ್‌ ನಡೆಸಿದ್ದು, ಎರಡೂವರೆ ಸಾವಿರ ಮಂದಿ ಪ್ರಾಥಮಿಕ, ದ್ವಿತೀಯ ಸಂಪರ್ಕಿತರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ. ಗ್ರಾಮೀಣ ಪ್ರದೇಶದಲ್ಲಿ ಸೋಂಕು ಹೆಚ್ಚಾಗುತ್ತಿದ್ದು, 184 ಹಳ್ಳಿಗರಲ್ಲಿ ಕೋವಿಡ್ ಪತ್ತೆಯಾಗಿದೆ.

ಮೂರೂವರೆ ಸಾವಿರ ಮಂದಿಗೆ ಲಸಿಕೆ ಕೊಡಲಾಗಿದ್ದು, ಇವರಲ್ಲಿ 175 ಬೂಸ್ಟರ್ ಡೋಸ್, 2837 ಮಂದಿಗೆ 2ನೇ ಡೋಸ್ ನೀಡಲಾಗಿದೆ. 3ನೇ ಅಲೆಯಲ್ಲಿ ಓರ್ವ ಮಾತ್ರ ಮೃತಪಟ್ಟಿದ್ದು, ಐಸಿಯುನಲ್ಲಿ ಒಬ್ಬರೂ ದಾಖಲಾಗಿಲ್ಲ ಎಂದು ಜಿಲ್ಲಾಡಳಿತ ಹೆಲ್ತ್ ಬುಲೆಟಿನ್​ನಲ್ಲಿ ತಿಳಿಸಿದೆ‌.

ಓದಿ:ವಿವಾದಾತ್ಮಕ ಹೇಳಿಕೆ ಪ್ರಕರಣ: ಕಾಳಿಮಠದ ಸ್ವಾಮೀಜಿಗೆ ಷರತ್ತುಬದ್ಧ ಜಾಮೀನು

Last Updated : Jan 19, 2022, 11:09 PM IST

ABOUT THE AUTHOR

...view details