ಕರ್ನಾಟಕ

karnataka

ETV Bharat / state

ವಿಜಯಪುರದಲ್ಲಿ ಮತ್ತೆ 15 ಜನರಿಗೆ ವಕ್ಕರಿಸಿದ ಕೊರೊನಾ - vijayapura corona updates

ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 220 ಜನ ಗುಣಮುಖರಾಗಿದ್ದು, 74 ಜನ ಸೋಂಕು ತಗುಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೆ ವೈರಸ್​ ದಾಳಿಗೆ 7 ಜನ ಸಾವನ್ನಪ್ಪಿದ್ದಾರೆ.

corona cases increased in vijayapura
ವಿಜಯಪುರ

By

Published : Jun 22, 2020, 7:58 PM IST

ವಿಜಯಪುರ:ಜಿಲ್ಲೆಯಲ್ಲಿ ಮತ್ತೆ ಇಂದು 15 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಇಲ್ಲಿಯವರೆಗೆ 301 ಪಾಸಿಟಿವ್ ಪ್ರಕರಣ ದಾಖಲಾಗಿದೆ. ಇವರಲ್ಲಿ 220 ಜನ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿದ್ದಾರೆ.

ಇಂದು 4 ಯುವತಿಯರು, 5 ಮಹಿಳೆಯರು, 5 ಪುರುಷರು ಹಾಗೂ ಓರ್ವ ಯುವಕನಿಗೆ ಕೊರೊನಾ ಸೋಂಕು ತಗುಲಿದ್ದು, ಇವರಲ್ಲಿ 6 ಜನರಿಗೆ ರೋಗಿ ನಂ.6246ರಿಂದ ಹಾಗೂ ಒಬ್ಬರಿಗೆ ರೋಗಿ ನಂ.6588ರಿಂದ ಸೋಂಕು ತಗುಲಿದೆ. ಉಳಿದವರಲ್ಲಿ ಇಬ್ಬರು ತೀವ್ರ ಉಸಿರಾಟದ ತೊಂದರೆ ಹಾಗೂ 6 ಜನ ವಿವಿಧ ರೋಗಗಳಿಂದ ಆಸ್ಪತ್ರೆ ಸೇರಿದಾಗ ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ.

ಇಂದು ಜಿಲ್ಲೆಯಲ್ಲಿ ಮೂರು ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇಲ್ಲಿಯವರೆಗೆ ಒಟ್ಟು 220 ಜನ ಗುಣಮುಖರಾಗಿದ್ದು, 74 ಜನ ಸೋಂಕು ತಗುಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೇ ವೈರಸ್​ ದಾಳಿಗೆ 7 ಜನ ಸಾವನ್ನಪ್ಪಿದ್ದಾರೆ.

ABOUT THE AUTHOR

...view details