ವಿಜಯಪುರ: ಜಿಲ್ಲೆಯಲ್ಲಿಂದು ಕೊರೊನಾ ರಣಕೇಕೆ ಹಾಕಿದ್ದು, ಒಂದೇ ದಿನ 39 ಜನರಿಗೆ ಸೋಂಕು ತಗುಲಿರುವುದು ದೃಢವಾಗಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 286ಕ್ಕೆ ಏರಿಕೆಯಾಗಿದೆ.
ಒಂದು ವರ್ಷದ ಬಾಲಕ ಸೇರಿ 4 ಬಾಲಕರು, ಇಬ್ಬರು ಬಾಲಕಿಯರು, ಮೂವರು ಯುವಕ, ಯುವತಿ, 14 ಜನ ಪುರುಷರು, 13 ಜನ ಮಹಿಳೆಯರಿಗೆ ಸೋಂಕು ತಗುಲಿದೆ. ಇದರಲ್ಲಿ 28 ಜನರಿಗೆ ಕಂಟೇನ್ಮೆಂಟ್ ಝೋನ್ನಲ್ಲಿ ಇದ್ದವರ ಮೂಲಕ ಸೋಂಕು ತಗುಲಿದೆ. ಉಳಿದ 11 ಜನ ತೀವ್ರ ಉಸಿರಾಟ ತೊಂದರೆ ಹಾಗೂ ಇನ್ನಿತರ ರೋಗದಿಂದ ಆಸ್ಪತ್ರೆಗೆ ದಾಖಲಾದಾಗ ಅವರ ಗಂಟಲು ದ್ರವ ಪರೀಕ್ಷೆ ನಡೆಸಿದಾಗ ಸೋಂಕು ಇರುವುದು ಕಂಡು ಬಂದಿದೆ.