ಮುದ್ದೇಬಿಹಾಳ: ಕೊರೊನಾ ಎರಡನೇ ಅಲೆ ಭೀಕರವಾಗಿದೆ ಎಂದು ಸರ್ಕಾರ ಹಾಗೂ ಸಾಕಷ್ಟು ಸಂಘ ಸಂಸ್ಥೆಗಳು ಜಾಗೃತಿ ಮೂಡಿಸುತ್ತಿವೆ. ಆದರೆ, ಪಟ್ಟಣದಲ್ಲಿ ವೃದ್ಧೆಯೊಬ್ಬಳು ನಾನು ಮಾಸ್ಕ್ ಧರಿಸುವುದಿಲ್ಲ. ನಾನು ಹೀಗೆ ಸಾಯ್ತೇನಿ ಎಂದು ಹೇಳಿರುವ ಪ್ರಸಂಗ ನಡೆದಿದೆ.
ಮನೆಯಲ್ಲಿ ಊಟ ಹಾಕಲ್ಲ, ಮಾಸ್ಕ್ ಧರಿಸಲ್ಲ: ನಾನು ಹೀಗೆ ಸಾಯ್ತಿನಿ ಎಂದ ಅಜ್ಜಿ! - ಮುದ್ದೇಬಿಹಾಳದಲ್ಲಿ ಕೊರೊನಾ ಜಾಗೃತಿ
ನನಗೆ ಸರಿಯಾಗಿ ಊಟ ಹಾಕುವುದಿಲ್ಲ, ನಾನು ಮಾಸ್ಕ್ ಹಾಕಲ್ಲ, ನಾನು ಹೀಗೆ ಸಾಯ್ತೇನಿ, ನಾನು ಬದುಕುವುದಿಲ್ಲ ಎಂದು ಅಜ್ಜಿ ಹೇಳಿರುವ ಪ್ರಸಂಗ ಮುದ್ದೇ ಬಿಹಾಳದಲ್ಲಿ ನಡೆದಿದೆ.
ಮಾಸ್ಕ್ ಹಾಕಲ್ಲ ಎಂದ ಅಜ್ಜಿ!
ಪೀಲೇಕಮ್ಮ ನಗರದದಲ್ಲಿ ಯುವ ಬಳಗದ ವತಿಯಿಂದ ಕಿರುತೆರೆ ಹಾಸ್ಯ ಕಲಾವಿದ ಗೋಪಾಲ ಹೂಗಾರ ನೇತೃತ್ವದಲ್ಲಿ ಕಲಾವಿದರು ಜನಜಾಗೃತಿ ಅಭಿಯಾನ ನಡೆಸುತ್ತಿದ್ದರು. ಈ ವೇಳೆ ವೃದ್ಧೆಯೊಬ್ಬಳು ಮಾಸ್ಕ್ ಹಾಕದೇ ಇರುವುದನ್ನು ಕಂಡ ಯಮನ ವೇಷಧಾರಿ ಹೂಗಾರ ಮಾಸ್ಕ್ ಹಾಕಿಕೊಳ್ಳುವಂತೆ ತಿಳಿಸಿದರು.
ಒಂದು ಸಲ ಮಾಸ್ಕ್ ಹಾಕಿದರೂ ಅದನ್ನು ಕಿತ್ತೆಸೆದ ವೃದ್ಧೆ ನಾನು ಬದುಕುವುದಿಲ್ಲ. ನನಗೆ ಸರಿಯಾಗಿ ಊಟ ಹಾಕುವುದಿಲ್ಲ ಎಂದು ಹೇಳಿಕೊಂಡಳು. ಇದರಿಂದ ವಿಚಲಿತರಾದ ಕಲಾವಿದರು ಅಜ್ಜಿ ಮನೆಯುವರಿಗೆ ವಯಸ್ಸಾದ ಅಜ್ಜಿಯನ್ನು ಚೆನ್ನಾಗಿ ನೋಡಿಕೊಳ್ಳುವಂತೆ ತಿಳಿ ಹೇಳಿ ಕೊನೆಗೆ ಮಾಸ್ಕ್ ಹಾಕಿಸಿದರು.