ವಿಜಯಪುರ: ನಗರದಲ್ಲಿ ಕೊರೊನಾ ಜಾಗೃತಿಗಾಗಿ ಕಲಾವಿದನೋರ್ವ ಯಮರಾಜನ ವೇಷಭೂಷಣ ಧರಿಸಿ ಗಾಂಧಿವೃತ್ತದಲ್ಲಿ ಸುತ್ತಾಡಿ ಸಾರ್ವಜನಿಕರಿಗೆ ಮಾಸ್ಕ್, ಸಾಮಾಜಿಕ ಅಂತರ ಕುರಿತು ಜಾಗೃತಿ ಮೂಡಿಸುವ ವಿನೂತನ ಕಾರ್ಯವನ್ನು ಹಮ್ಮಿಕೊಂಡು ಸಾರ್ವಜನಿಕರ ಪ್ರಶಂಸೆಗೆ ಪಾತ್ರನಾದರು.
ಏ.. ಬಾರೋ ಇಲ್ಲಿ ನರಮಾನವ: ಮಾಸ್ಕ್ ಹಾಕದಿದ್ರೆ ಯಮಲೋಕದಲ್ಲೂ ಜಾಗ ಇಲ್ಲವೆಂದ 'ಯಮರಾಜ' - ವಿಜಯಪುರದಲ್ಲಿ ಯಮರಾಜ
ವಿಜಯಪುರದ ಕಲಾವಿದ ಜ್ಯೂ. ಗಣೇಶ (ಶಕ್ತಿಕುಮಾರ) ಯಮರಾಜನ ವೇಷಭೂಷಣ ತೊಟ್ಟು ಮೊದಲು ಕೇಂದ್ರ ಬಸ್ ನಿಲ್ದಾಣದಲ್ಲಿ ಮಾಸ್ಕ್ ಹಾಕದವರನ್ನು ಅಟ್ಟಾಡಿಸಿಕೊಂಡು ಹೋಗಿ ಮಾಸ್ಕ್ ಬಗ್ಗೆ ಅರಿವು ಮೂಡಿಸಿದರು. ಮಾಸ್ಕ್ ಹಾಕದವರಿಗೆ ಯಮಲೋಕದಲ್ಲೂ ಜಾಗವಿಲ್ಲದಂತಾಗಿದೆ. ಹೀಗಾಗಿ ದಯವಿಟ್ಟು ಸರ್ಕಾರದ ಮಾರ್ಗಸೂಚಿ ಅನುಸರಿಸಿ ಜೀವ ಉಳಿಸಿಕೊಳ್ಳಿ ಎಂದು ಅರಿವು ಮೂಡಿಸಿದರು.
ವಿಜಯಪುರದ ಕಲಾವಿದ ಜ್ಯೂ. ಗಣೇಶ (ಶಕ್ತಿಕುಮಾರ) ಯಮರಾಜನ ವೇಷಭೂಷಣ ಧರಿಸಿ ಮೊದಲು ಕೇಂದ್ರ ಬಸ್ ನಿಲ್ದಾಣದಲ್ಲಿ ಮಾಸ್ಕ್ ಹಾಕದವರನ್ನು ಅಟ್ಟಾಡಿಸಿಕೊಂಡು ಹೋದರು. ಮಾಸ್ಕ್ ಬಗ್ಗೆ ಅರಿವು ಮೂಡಿಸಿದ್ದಲ್ಲದೇ ಮಾಸ್ಕ್ ಹಾಕದವರಿಗೂ ಯಮಲೋಕದಲ್ಲಿಯೂ ಜಾಗವಿಲ್ಲದಂತಾಗಿದೆ. ಹೀಗಾಗಿ ದಯವಿಟ್ಟು ಸರ್ಕಾರದ ಮಾರ್ಗಸೂಚಿ ಅನುಸರಿಸಿ ಜೀವ ಉಳಿಸಿಕೊಳ್ಳಿ ಎಂದು ಮನವಿ ಮಾಡಿದನು.
ಮಾಸ್ಕ್ ಹಾಕದಿದ್ದರೇ ಯಮಲೋಕಕ್ಕೆ ಬರಬೇಕಾಗುತ್ತೆ ಹುಷಾರ್ ಎಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದರು. ಸಾವನ್ನಪ್ಪಿದ ಕೊರೊನಾ ಸೋಂಕಿತರಿಂದ ಯಮಲೋಕದಲ್ಲಿ ರಶ್ ಆಗಿದೆ. ನೀವು ಮಾಸ್ಕ್ ಹಾಕಿಕೊಂಡು ಪ್ರಾಣ ಉಳಿಸಿಕೊಳ್ಳಿ ಎಂದು ನವಿರಾದ ಹಾಸ್ಯದ ಜೊತೆಗೆ ಜಾಗೃತಿ ಮೂಡಿಸಿದರು. ಈ ಮೂಲಕ ಜ್ಯೂ. ಗಣೇಶ್ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.