ಕರ್ನಾಟಕ

karnataka

ETV Bharat / state

ಜಾಗೃತಿ ಫಲಕ ಹಿಡಿದು ಪೊಲೀಸರಿಂದ ಕೊರೊನಾ ಜಾಗೃತಿ

ಕೊರೊನಾ ಭೀತಿಯಿರುವುದರಿಂದ, ಯಾರೂ ರಸ್ತೆಗೆ ಇಳಿಯಬೇಡಿ. ಮನೆಯಲ್ಲಿ ಸುರಕ್ಷಿತವಾಗಿ‌ ಉಳಿಯಿರಿ ಎಂದು ಕೈಯಲ್ಲಿ ಫಲಕ ಹಿಡಿದು ಪೊಲೀಸರು ಜಾಗೃತಿ ಮೂಡಿಸಿದರು.

By

Published : Apr 21, 2020, 2:32 PM IST

ವಿಜಯಪುರ: ಕೊರೊನಾ ಆತಂಕ ಹೆಚ್ಚಾಗಿದೆ‌. ಯಾರೂ ರಸ್ತೆಗೆ ಇಳಿಯಬೇಡಿ. ಮನೆಯಲ್ಲಿ ಸುರಕ್ಷಿತವಾಗಿ‌ ಉಳಿಯಿರಿ ಎಂದು ಕೈಯಲ್ಲಿ ಫಲಕ ಹಿಡಿದು ರಸ್ತೆಯಲ್ಲಿ ಹೋಗುವರಿಗೆ ಪೊಲೀಸರು ಜಾಗೃತಿ ಮೂಡಿಸಿದರು.

ನಗರವನ್ನು ರೆಡ್ ಜೋನ್ ಪ್ರದೇಶ ಎಂದು ಜಿಲ್ಲಾಡಳಿತ ಘೋಷಣೆ‌ ಮಾಡಿ ಸಾರ್ವಜನಿಕ ಸಂಚಾರಕ್ಕೆ ಕಡಿವಾಣ ಹಾಕಲಾಗಿದೆ. ಆದರೂ ದಿನಸಿ ನೆಪದಲ್ಲಿ ಜನರು ಓಡಾಟ ನಡೆಸುತ್ತಿದ್ದರು.

ಜಾಗೃತಿ ಫಲಕ ಹಿಡಿದು ಪೊಲೀಸರಿಂದ ಕೊರೊನಾ ಜಾಗೃತಿ

ಗಾಂಧಿ ವೃತ್ತದಲ್ಲಿ ಪೊಲೀಸರು ಕೈಯಲ್ಲಿ ಜಾಗೃತಿ ಫಲಕಗಳನ್ನ ಹಿಡಿದು ಕೊರೊನಾ ವೈರಸ್ ಭಯಾನಕವಾಗಿ ಜೀವಕ್ಕೆ ಆಪತ್ತು ತರುತ್ತೆ. ನೀವು ರಸ್ತೆಗೆ ಬರಬೇಡಿ ಮನೆಯಲ್ಲಿ ಇರುಬೇಕು ಎಂದು ಸಂದೇಶ ಫಲಕಗಳ ಮೂಲಕ ಸಾರ್ವಜನಿಕರಿಗೆ ತಿಳಿಸಿದರು.

ಬೈಕ್​ನಲ್ಲಿ ಹೋಗುವ ಜನರಿಗೆ ಜಾಗೃತಿ ಫಲಕಗಳನ್ನ ಓದುವಂತೆ ಪೊಲೀಸರು ಹೇಳಿದರು. ಇತ್ತ ಡಿಎಸ್‌ಪಿ ಲಕ್ಷ್ಮೀ ನಾರಾಯಣ ಬೈಕ ಸಾವಾರರಿಗೆ ಕೊರೊನಾ ಜಾಗೃತಿ ಬರಹ ತೋರಿಸಿ ಮನೆಯಲ್ಲಿ ಇರುವಂತೆ ಬುದ್ದಿ ಹೇಳಿದರು.

ABOUT THE AUTHOR

...view details