ವಿಜಯಪುರ:ಮುದ್ದೇಬಿಹಾಳ ಪಟ್ಟಣದ ಹುಡ್ಕೋ ಕಾಲೋನಿಯಲ್ಲಿರುವ ಮದರಿ ಕಾಂಪ್ಲೆಕ್ಸ್ನ ಟೆಂಡರ್ ಪ್ರಕ್ರಿಯೆ ಮುಂದೂಡಲು ಸರ್ಕಾರದ ನಿರ್ದೇಶನವಿದ್ದರೂ ಪಾಲಿಸದ ಅಧಿಕಾರಿಯನ್ನ ಅಮಾನತುಗೊಳಿಸುವಂತೆ ಮುದ್ದೇಬಿಹಾಳ ತಾಲೂಕಿನ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ಸರ್ಕಾರದ ನಿರ್ದೇಶನ ಗಾಳಿಗೆ ತೂರಿ ಟೆಂಡರ್ ಪ್ರಕ್ರಿಯೆ... ಕೆಬಿಜೆಎನ್‌ಎಲ್ ಅಧಿಕಾರಿ ಅಮಾನತಿಗೆ ಗುತ್ತಿಗೆದಾರರ ಆಗ್ರಹ - Vijayapura News
ಸರ್ಕಾರದ ನಿರ್ದೇಶನ ಗಾಳಿಗೆ ತೂರಿ ಟೆಂಡರ್ ಪ್ರಕ್ರಿಯೆ ನಡೆಸಿರುವ ಕೆಬಿಜೆಎನ್‌ಎಲ್ ಎಕ್ಸಕ್ಯೂಟಿವ್ ಎಂ.ಆರ್. ಹಲಗತ್ತಿ ಅವರನ್ನು ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಮುದ್ದೇಬಿಹಾಳ ತಾಲೂಕಿನ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ಸರ್ಕಾರದ ನಿರ್ದೇಶನ ಗಾಳಿಗೆ ತೂರಿ ಟೆಂಡರ್ ಪ್ರಕ್ರಿಯೆ..ಕೆಬಿಜೆಎನ್‌ಎಲ್ ಅಧಿಕಾರಿ ಅಮಾನತಿಗೆ ಗುತ್ತಿಗೆದಾರರ ಆಗ್ರಹ
ಕೊರೊನಾ ವೈರಸ್ ಹರಡುವಿಕೆ ತಡೆಗಟ್ಟುವ ಸಲುವಾಗಿ ಎಲ್ಲ ಟೆಂಡರ್ ಪ್ರಕ್ರಿಯೆಗಳನ್ನ ಮುಂದೂಡಲು ಸರ್ಕರ ನಿರ್ದೇಶನ ನೀಡಿದೆ. ಆದರೂ ಸರ್ಕಾರದ ನಿರ್ದೇಶನ ಗಾಳಿಗೆ ತೂರಿ ಟೆಂಡರ್ ಪ್ರಕ್ರಿಯೆ ನಡೆಸಿರುವ ಕೆಬಿಜೆಎನ್‌ಎಲ್ ಎಕ್ಸಕ್ಯೂಟಿವ್ ಎಂ.ಆರ್. ಹಲಗತ್ತಿ ಅವರನ್ನು ಸೇವೆಯಿಂದ ಅಮಾನತುಗೊಳಿಸಬೇಕು ಎಂದು ತಾಲೂಕಿನ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಆಗ್ರಹಿಸಿದರು.
ಸಭೆಯಲ್ಲಿ ಗುತ್ತಿಗೆದಾರರಾದ ರಾಯನಗೌಡ ತಾತರೆಡ್ಡಿ, ಶ್ರೀಶೈಲ ಮರೋಳ, ರಾಜುಗೌಡ ಕೊಂಗಿ, ಸುರೇಶಗೌಡ ಪಾಟೀಲ, ಬಸನಗೌಡ ಪಾಟೀಲ, ಬಸವರಾಜ ಇಸ್ಲಾಂಪೂರ ಮತ್ತಿತರರು ಹಾಜರಿದ್ದರು.