ವಿಜಯಪುರ: ಅನ್ನದಾತನ ಆತ್ಮಹತ್ಯೆ ಸರಣಿ ಮುಂದುವರೆದಿದ್ದು, ಇದೀಗ ಮತ್ತೊಬ್ಬ ಅನ್ನದಾತ ಆತ್ಮಹತ್ಯೆಗೆ ಶರಣಾಗಿದ್ದಾನೆ. ಜಿಲ್ಲೆಯ ಚಡಚಣ ತಾಲೂಕಿನ ನಿವರಗಿ ಗ್ರಾಮದ ಪ್ರಕಾಶ ಹನುಮಂತ ಕುಲಕರ್ಣಿ ಎಂಬ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮುಂದುವರೆದ ಅನ್ನದಾತನ ಆತ್ಮಹತ್ಯೆ ಸರಣಿ.. - former death news
ರೈತರ ಆತ್ಮಹತ್ಯೆ ಸರಣಿ ಮುಂದುವರೆದಿದ್ದು, ಇದೀಗ ಮತ್ತೊಬ್ಬ ಅನ್ನದಾತ ಆತ್ಮಹತ್ಯಗೆ ಶರಣಾಗಿರುವ ಘಟನೆ ಜಿಲ್ಲೆಯ ಚಡಚಣ ತಾಲೂಕಿನಲ್ಲಿ ನಡೆದಿದೆ.
ಮುಂದುವರೆದ ಅನ್ನದಾತನ ಆತ್ಮಹತ್ಯೆ ಸರಣಿ
ಹನುಮಂತ ಕುಲಕರ್ಣಿ ನೆರೆಯ ಮಹಾರಾಷ್ಟ್ರದ ಮಂಗಳವೇಡಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಬಾಲಾಜಿನಗರ ಪಾಟಾ ಬಳಿ ಬೇವಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಹಾರಾಷ್ಟ್ರದ ಮಂಗಳವೇಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸ್ಥಳಕ್ಕೆ ಮಂಗಳವೇಡಾ CPI PA ಘಾಡೆ ಭೇಟಿ ನೀಡಿ ಪರಿಶೀಲಿಸಿ ದೂರು ದಾಖಲಿಸಿಕೊಂಡಿದ್ದಾರೆ.