ವಿಜಯಪುರ : ಜಿಲ್ಲೆಯ ಚಡಚಣ ತಾಲೂಕಿನ ಶರಾಡೋಣ ಗ್ರಾಮದ ಬಳಿ ಸುಮಾರು 5 ಲಕ್ಷ ರೂ. ಮೌಲ್ಯದ 12 ಕೆ.ಜಿ ಅಫೀಮು ಹಾಗೂ ಗಸಗಸೆ ಪೌಡರ್ ಅಫೀಮು ಸಾಗಿಸುತ್ತಿದ್ದ ಕಂಟೇನರ್ನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ರಾಜಸ್ಥಾನದಿಂದ ದ್ವಿಚಕ್ರ ವಾಹನಗಳ ಬಿಡಿ ಭಾಗಗಳನ್ನು ತುಂಬಿಕೊಂಡು ಕಂಟೇನರ್ ಬೆಂಗಳೂರಿಗೆ ಹೋಗುತ್ತಿತ್ತು. ಈ ವೇಳೆ ಕಂಟೇನರ್‌ನಲ್ಲಿ ಮಾದಕ ವಸ್ತುವಿರುವ ಖಚಿತ ಮಾಹಿತಿ ಮೇರೆಗೆ ಅಬಕಾರಿ ಜಂಟಿ ಆಯುಕ್ತ ಡಾ. ವೈ ಮಂಜುನಾಥ ನೇತೃತ್ವದ ತಂಡವು ಶರಾಡೋಣ ಗ್ರಾಮದ ಬಳಿ ದಾಳಿ ನಡೆಸಿದೆ.