ಕರ್ನಾಟಕ

karnataka

ETV Bharat / state

ತಿಕೋಟಾ ತಾಪಂ ಅಧ್ಯಕ್ಷ-ಉಪಾಧ್ಯಕ್ಷರ ಅವಿರೋಧ ಆಯ್ಕೆ: 'ಕೈ'ಗೆ ಅಧಿಕಾರ - Babaleshwara taluk panchayath election

ತಿಕೋಟಾ ತಾಲೂಕು ಪಂಚಾಯತ್ ಅಧ್ಯಕ್ಷರಾಗಿ ಪ್ರಭಾವತಿ ನಾಟೀಕಾರ, ಉಪಾಧ್ಯಕ್ಷರಾಗಿ ರಾಜಕುಮಾರ ಮಸಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Election
Election

By

Published : Jul 17, 2020, 11:50 AM IST

ವಿಜಯಪುರ: ಇಂದು ನಡೆದ ಬಬಲೇಶ್ವರ ವಿಧಾನಸಭಾ ಮತಕ್ಷೇತ್ರದ ತಿಕೋಟಾ ತಾಲೂಕು ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿದೆ.

ಅಧ್ಯಕ್ಷರಾಗಿ ಪ್ರಭಾವತಿ ನಾಟೀಕಾರ, ಉಪಾಧ್ಯಕ್ಷರಾಗಿ ರಾಜಕುಮಾರ ಮಸಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕು ಪಂಚಾಯತ್​ನಲ್ಲಿ ಒಟ್ಟು ಸದಸ್ಯ ಬಲ 13 ಇದ್ದು, ಕಾಂಗ್ರೆಸ್ 10 ಹಾಗೂ ಬಿಜೆಪಿಯ 3 ಸದಸ್ಯರಿದ್ದಾರೆ. ಏಕಪಕ್ಷೀಯವಾಗಿ ಚುನಾವಣೆ ನಡೆಯಬೇಕಾಗಿತ್ತು.

ಇಂದಿನ ಚುನಾವಣೆ ಪ್ರಕ್ರಿಯೆಗೆ ಮೊದಲು ಬಿಜೆಪಿಯ ಮೂವರು ಸದಸ್ಯೆಯರಾದ ಬಾಬಾನಗರ ಕ್ಷೇತ್ರದ ಕಾದಂಬರಿ ರಾಮನಗೌಡ ಬಿರಾದಾರ, ಇಟ್ಟಂಗಿಹಾಳ ಕ್ಷೇತ್ರದ ಕಮಲಾ ಬಾಯಿ ಗಣು ನಾಯಕ ಹಾಗೂ ಬರಟಗಿ ಕ್ಷೇತ್ರದ ಸುಮಿತ್ರಾ ಕೃಷ್ಣಾ ನಾಯಕ, ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಸಿದ್ದು ಗೌಡನವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಳ್ಳುವ ಮೂಲಕ ಬಿಜೆಪಿ ಸಂಖ್ಯಾ ಬಲವನ್ನು ಶೂನ್ಯ ಮಾಡಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಹಿಡಿಯಿತು.

ನಂತರ ನಡೆದ ತಾಲೂಕು ಪಂಚಾಯತ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ತಿಕೋಟಾ ತಾಪಂ ಸದಸ್ಯೆ ಪ್ರಭಾವತಿ ಭೀಮಸೇನ ನಾಟಿಕಾರ, ಸಾಮಾನ್ಯ ವರ್ಗಕ್ಕೆ ಸೇರಿದ ಉಪಾಧ್ಯಕ್ಷ ಸ್ಥಾನಕ್ಕೆ ಬಿಜ್ಜರಗಿ ತಾಪಂ ಸದಸ್ಯ ರಾಜಕುಮಾರ ಶ್ರೀಶೈಲ ಮಸಳಿ ನಾಮಪತ್ರ ಸಲ್ಲಿಸಿದ್ದರು. ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಇವರು ಅವಿರೋಧವಾಗಿ ಆಯ್ಕೆಯಾದರು.

ಬಬಲೇಶ್ವರ ಬಿಜೆಪಿ ಪಾಲು:
ಶಾಸಕ ಎಂ.ಬಿ.ಪಾಟೀಲ್ ಸ್ವ ಕ್ಷೇತ್ರದಲ್ಲಿ ಎರಡು ಹೊಸ ತಾಲೂಕು ಘೋಷಣೆ ಮಾಡಲಾಗಿತ್ತು. ಬಬಲೇಶ್ವರ ತಾಲೂಕು ಪಂಚಾಯತ್​ನಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 8, ಕಾಂಗ್ರೆಸ್ 5 ಸದಸ್ಯರನ್ನು ಹೊಂದಿದ್ದು, ಬಿಜೆಪಿ ಸರಳ ಬಹುಮತ ಹೊಂದಿರುವ ಕಾರಣ ಕಾಂಗ್ರೆಸ್ ಚುನಾವಣೆ ಪ್ರಕ್ರಿಯೆಯಿಂದ ದೂರ ಉಳಿದ ಕಾರಣ ಬಬಲೇಶ್ವರ ತಾಪಂ ಬಿಜೆಪಿ ಪಾಲಾಗಿದೆ.

ABOUT THE AUTHOR

...view details