ಕರ್ನಾಟಕ

karnataka

ETV Bharat / state

ಕೊರೊನಾ ನಿಯಂತ್ರಿಸುವಲ್ಲಿ ರಾಜ್ಯ - ಕೇಂದ್ರ ಸರ್ಕಾರಗಳು ವಿಫಲ: ಪ್ರಕಾಶ ರಾಠೋಡ - ವಿಜಯಪುರ ಕಾಂಗ್ರೆಸ್ ಪತ್ರಿಕಾಗೋಷ್ಠಿ ಸುದ್ದಿ

ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರ ಕೊರೊನಾ‌ ನಿಯಂತ್ರಣ ಮಾಡುತ್ತಿಲ್ಲ. ದಿನದಿಂದ ದಿನಕ್ಕೆ ಕೊರೊನಾ ಸ್ಥಿತಿ ಬಿಗಡಾಯಿಸುತ್ತಿದೆ. ಆದರೆ, ಸರ್ಕಾರ ಇದನ್ನು ನಿಭಾಯಿಸುವಲ್ಲಿ ವಿಫಲವಾಗಿದೆ ಎಂದು ಕಾಂಗ್ರೆಸ್​ ಆರೋಪಿಸಿದೆ.

ಕಾಂಗ್ರೆಸ್ ಪತ್ರಿಕಾಗೋಷ್ಠಿ
ಕಾಂಗ್ರೆಸ್ ಪತ್ರಿಕಾಗೋಷ್ಠಿ

By

Published : Jul 1, 2020, 3:19 PM IST

ವಿಜಯಪುರ: ಕೊರೊನಾ ನಿಯಂತ್ರಿಸುವಲ್ಲಿ ಸಂಪೂರ್ಣವಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಎಡವಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರಕಾಶ ರಾಠೋಡ ಕಿಡಿಕಾರಿದರು.

ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರ ಕೊರೊನಾ‌ ನಿಯಂತ್ರಣ ಮಾಡುತ್ತಿಲ್ಲ. ದಿನದಿಂದ ದಿನಕ್ಕೆ ಕೊರೊನಾ ಸ್ಥಿತಿ ಬಿಗಡಾಯಿಸುತ್ತಿದೆ. ಆದರೆ, ಸರ್ಕಾರ ಇದನ್ನು ನಿಭಾಯಿಸುವಲ್ಲಿ ವಿಫಲವಾಗಿದೆ. ಇತ್ತ ರಾಜ್ಯ ಸರ್ಕಾರ ಕೊರೊನಾ ವೈರಸ್​​​ ನಿಯಂತ್ರಣಕ್ಕೆ ಮಾಡಿದ ಖರ್ಚು ವೆಚ್ಚಗಳ ಕುರಿತು‌ ಶ್ವೇತ ಪತ್ರ ಹೊರಡಿಸಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಪತ್ರಿಕಾಗೋಷ್ಠಿ

ಜುಲೈ 2 ರಂದು ನಡೆಯುವ ಕೆಪಿಸಿಸಿ ರಾಜ್ಯಾಧ್ಯಕ್ಷರ ಪದಗ್ರಹಣಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ‌. 10 ಲಕ್ಷ ಕಾರ್ಯಕರ್ತರು ಆನ್‌ಲೈನ್ ಮೂಲಕ ವೀಕ್ಷಣೆ ಮಾಡಲಿದ್ದಾರೆ‌‌. ಜಿಲ್ಲಾ ಕೇಂದ್ರಗಳಲ್ಲಿ ಕೂಡ ವೀಕ್ಷಿಸಲು ಅವಕಾಶ ಮಾಡಲಾಗಿದೆ ಎಂದರು‌.

ಬಳಿಕ ಮಾತಾನಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜು ಆಲಗೂರ, ಪದಗ್ರಹಣ ಸಮಾರಂಭ ವೀಕ್ಷಣೆಗೆ ಗ್ರಾಮೀಣ ಭಾಗದಲ್ಲಿ 275 ಸ್ಥಳಗಳಲ್ಲಿ ಅವಕಾಶ ಹಾಗೂ ವಿಜಯಪುರ ನಗರದ ಎಲ್ಲ ಎಲ್ಲ ವಾರ್ಡ್‌ಗಳಲ್ಲಿ ಅವಕಾಶ ಮಾಡಲಾಗುವುದು. ಇದು ಐತಿಹಾಸಿಕ ಕ್ಷಣವಾಗಲಿದೆ ಹಾಗೂ ನಿನ್ನೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನ ಪಕ್ಷಕ್ಕೆ ಬಂದಿರೋದು ಸಂಸತ ತಂದಿದೆ ಎಂದರು.

ABOUT THE AUTHOR

...view details