ಕರ್ನಾಟಕ

karnataka

ETV Bharat / state

ಇತಿಹಾಸ ಇದ್ದಂತೆಯೇ ಮಕ್ಕಳಿಗೆ ಕಲಿಸಿ, ತಿರುಚಬೇಡಿ : ಮಾಜಿ ಸಚಿವ ಎಂ ಬಿ ಪಾಟೀಲ್​

ರೋಹಿತ್​ ಚಕ್ರತೀರ್ಥ ಅವರ ಸಮಿತಿ ಪರಿಷ್ಕರಿಸಿದ ಪಠ್ಯಪುಸ್ತಕವನ್ನು ಆಕ್ಷೇಪಿಸಿದ ಮಾಜಿ ಸಚಿವ ಎಂಬಿ ಪಾಟೀಲ್​, ಇತಿಹಾಸವನ್ನು ಇದ್ದಂತೆಯೇ ಕಲಿಸಿ, ಅದನ್ನು ತಿರುಚಬೇಡಿ ಎಂದು ಹೇಳಿದರು..

congress-leader-m-b-patil
ಎಂ.ಬಿ. ಪಾಟೀಲ್​

By

Published : Jun 6, 2022, 5:53 PM IST

ವಿಜಯಪುರ : ಹೆಡ್ಗೇವಾರ್​ ಇತಿಹಾಸವನ್ನು ಹಾಗೆಯೇ ಬರೆದು ಹಾಕಿ. ಸಾವರ್ಕರ್ ಜೈಲಿಗೆ ಹೋಗಿ ಕ್ಷಮಾಪಣೆ ಕೇಳಿದ್ದರು. ಅದನ್ನು ಬೇಕಾದರೂ ಹಾಕಿ. ಇತಿಹಾಸವನ್ನು ಇದ್ದಂತೆಯೇ ಮಕ್ಕಳಿಗೆ ಕಲಿಸಿ. ಅದನ್ನು ತಿರುಚಬೇಡಿ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯನ್ನು ವಜಾಗೊಳಿಸಿದ್ದೀರಿ. ಇಷ್ಟು ಮಾತ್ರ ಮಾಡಿದರೆ ಸಾಲದು, ಆ ಸಮಿತಿ ಪರಿಷ್ಕರಿಸಿದ ಪಠ್ಯವನ್ನೂ ತೆಗೆದು ಹಾಕಬೇಕು ಎಂದು ಆಗ್ರಹಿಸಿದರು.

ನಾಡಿನ ಶ್ರೇಷ್ಠ ಸಾಹಿತಿಗಳನ್ನು, ಬುದ್ಧಿಜೀವಿ, ಚಿಂತಕರನ್ನು ಒಗ್ಗೂಡಿಸಿ ಕಮಿಟಿ ಮಾಡಿ. ನಿಮ್ಮ ಅಜೆಂಡಾದವರನ್ನು ಅಲ್ಲಿ ಕೂಡಿಸುವುದಲ್ಲ. ಮಹಾತ್ಮ ಗಾಂಧಿ, ಬಸವಣ್ಣ, ಬಾಬಾ ಸಾಹೇಬ್ ಅಂಬೇಡ್ಕರ್, ಅಬ್ದುಲ್ ಕಲಾಂ ಅವರಂತಹ ಅನೇಕ ನಾಯಕರ ಇತಿಹಾಸ ತಿರುಚಲು ಬಿಡುವುದಿಲ್ಲ ಎಂದರು.

ರಾಷ್ಟ್ರ ಕಟ್ಟಿದ ನಾಯಕರು, ಸಂತರು, ಶರಣರ ಇತಿಹಾಸ ತಿರುಚಲು ಬಿಡಲ್ಲ. ಬಸವಣ್ಣನವರ ವಿಚಾರದಲ್ಲಿ ಸಾಣೇಹಳ್ಳಿ ಶ್ರೀಗಳು ಸಿಎಂಗೆ ಸುದೀರ್ಘ ಪತ್ರ ಬರೆದಿದ್ದಾರೆ. ಕುವೆಂಪು ವಿಚಾರದಲ್ಲಿ ಆದಿಚುಂಚನಗಿರಿ ಶ್ರೀಗಳು ಧ್ವನಿಯೆತ್ತಿದ್ದಾರೆ. ಇತಿಹಾಸವನ್ನು ತಿರುಚದೇ ಹಾಗೆಯೇ ಮಕ್ಕಳಿಗೆ ಕಲಿಸಿ ಎಂದು ಪಾಟೀಲ್​ ಒತ್ತಾಯಿಸಿದರು.

ಓದಿ:ಕಲುಷಿತ ನೀರು ಸೇವಿಸಿ ಮೃತಪಟ್ಟ ಕುಟುಂಬಕ್ಕೆ ₹5 ಲಕ್ಷ ಪರಿಹಾರ ಘೋಷಿಸಿದ ಸಿಎಂ

ABOUT THE AUTHOR

...view details