ವಿಜಯಪುರ :ನಗರದ ಸಾಯಿ ಪಾರ್ಕ್ ಬಡಾವಣೆಯ ಲಕ್ಷ್ಮಿ ದೇವಸ್ಥಾನದಲ್ಲಿ ನಡೆದ ಕೋವಿಡ್ ಲಸಿಕಾ ಅಭಿಯಾನ ಗೊಂದಲದ ಗೂಡಾಗಿತ್ತು.
ಶಾಸಕ ಬಸನಗೌಡ ಪಾಟೀಲ ಯತ್ನಾಳ್ ನೇತೃತದಲ್ಲಿ ನಗರದ 6 ಕಡೆಗಳಲ್ಲಿ 45 ವರ್ಷದ ಮೇಲ್ಪಟ್ಟವರಿಗೆ ಲಸಿಕೆ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
ಬೆಳಗ್ಗೆಯಿಂದಲೇ ಸಾರ್ವಜನಿಕರು ಲಸಿಕೆ ಹಾಕಿಕೊಳ್ಳಲು ಸಾಲಿನಲ್ಲಿ ನಿಂತಿದ್ದರು. ಆದರೆ, ಡಾಟಾ ಎಂಟ್ರಿ ಸರಿಯಾಗಿ ಮಾಡದ ಕಾರಣ ಮೊದಲೇ ಲಸಿಕೆಗಾಗಿ ನೋಂದಣಿ ಮಾಡಿಕೊಂಡವರು ಪರದಾಡಬೇಕಾಯಿತು.
ವಿಜಯಪುರ: ಕೋವಿಡ್ ವ್ಯಾಕ್ಸಿನ್ ಅಭಿಯಾನದಲ್ಲಿ ಗೊಂದಲ ಇದರ ಜತೆ ಲಸಿಕೆ ಹಾಕುವ ವ್ಯವಸ್ಥೆ ಸಹ ಗೊಂದಲದಿಂದ ಕೂಡಿತ್ತು. ಮೊದಲು ಡೋಸ್ ಹಾಕಿಕೊಂಡವರು ಸಹ ಎರಡನೇ ಡೋಸ್ ಲಸಿಕೆಗಾಗಿ ಬಂದಿದ್ದರು. ಅಲ್ಲದೇ ಮೊದಲು ಲಸಿಕೆ ಹಾಕಿಕೊಳ್ಳುವವರು, ನೋಂದಣಿ ಮಾಡದವರು ಆಗಮಿಸಿದ ಕಾರಣ ಆರೋಗ್ಯ ಇಲಾಖೆ ಗೊಂದಲಕ್ಕೆ ಎಡೆ ಮಾಡಿಕೊಟ್ಟಿತು.
ಈ ಹಿಂದೆ ಡಾಟಾ ಎಂಟ್ರಿಯಲ್ಲಿದ್ದವರಿಗೆ ಲಸಿಕೆ ಹಾಕಿಕೊಳ್ಳಲು ಅವಕಾಶ ನೀಡಲಾಯಿತು. ಆದರೆ, ಸಾಕಷ್ಟು ಜನರು ಮೊದಲು ಲಸಿಕೆ ಹಾಕಿಕೊಂಡು ಎರಡನೇ ಲಸಿಕೆ ಹಾಕಿಕೊಂಡವರ ನೋಂದಣಿ ಸಹ ಕಂಡು ಬಾರದ ಕಾರಣ ಸಾರ್ವಜನಿಕರು ತೊಂದರೆ ಅನುಭವಿಸಬೇಕಾಯಿತು.
ಸಾಕಷ್ಟು ಜನ ಒಂದಡೇ ಸೇರಿದ ಕಾರಣ ಲಕ್ಷ್ಮಿ ದೇವಸ್ಥಾನದಲ್ಲಿ ಜನಜಂಗುಳಿ ಉಂಟಾಗಿತ್ತು. ಹೆಸರು ನೋಂದಾಯಿಸಲು ಕ್ಯೂನಲ್ಲಿ ನಿಂತವರಲ್ಲಿ ಸಾಮಾಜಿಕ ಅಂತರವಿಲ್ಲದ ಕಾರಣ ಆರೋಗ್ಯ ಇಲಾಖೆಯಿಂದ ಸಾಮಾಜಿಕ ಅಂತರ ಕಾಪಾಡಲು ಮನವಿ ಮಾಡಲಾಯಿತು.