ಕರ್ನಾಟಕ

karnataka

ETV Bharat / state

ಮಹಿಳೆಯರಿಗೆ ಉಚಿತ ಪ್ರಯಾಣ: ಸೀಟ್ ಮೇಲೆ ಹತ್ತಿ ಟಿಕೆಟ್ ನೀಡಿದ ಕಂಡಕ್ಟರ್​ ವಿಡಿಯೋ ವೈರಲ್ - shakti yojan

ಉಚಿತ ಬಸ್​ ಹಿನ್ನೆಲೆ ಮಹಿಳೆಯರಿಂದ ತುಂಬಿದ್ದ ಬಸ್​ನಲ್ಲಿ ಕಂಡಕ್ಟರ್​ ಸೀಟ್​ ಮೇಲೆ ಹತ್ತಿ ಟಿಕೆಟ್​ ನೀಡಿರುವ ವಿಡಿಯೋ ವೈರಲ್​ ಆಗಿದೆ.

ಸೀಟ್ ಮೇಲೆ ಹತ್ತಿ ಟಿಕೆಟ್ ನೀಡಿದ ಕಂಡಕ್ಟರ್​
ಸೀಟ್ ಮೇಲೆ ಹತ್ತಿ ಟಿಕೆಟ್ ನೀಡಿದ ಕಂಡಕ್ಟರ್​

By

Published : Jun 14, 2023, 1:29 PM IST

Updated : Jun 14, 2023, 2:05 PM IST

ಸೀಟ್ ಮೇಲೆ ಹತ್ತಿ ಟಿಕೆಟ್ ನೀಡಿದ ಕಂಡಕ್ಟರ್

ವಿಜಯಪುರ: ರಾಜ್ಯ ಸರ್ಕಾರ ಜಾರಿ ಮಾಡಿರುವ ಶಕ್ತಿ ಯೋಜನೆ ಹಿನ್ನೆಲೆ ಮಹಿಳಾ ಪ್ರಯಾಣಿಕರು ಬಸ್​ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಂಚಾರ ಮಾಡಿ ಯೋಜನೆಯ ಸೌಲಭ್ಯ ಪಡೆಯುತ್ತಿದ್ದಾರೆ. ಈ ನಡುವೆಯೇ ನಿನ್ನೆ ಅಫಜಲಫುರ ದಿಂದ ಬ್ಯಾಡಗಿಗೆ ಹೊರಟಿದ್ದ ಬಸ್​ನಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸಿದ್ದರಿಂದ ಇಡೀ ಬಸ್​ ಪ್ರಯಾಣಿಕರಿಂದ ನಿಲ್ಲಲು ಸ್ಥಳವಿಲ್ಲದೇ ತುಂಬಿ ಹೋಗಿದೆ.

ಈ ವೇಳೆ ಬಸ್​ ಕಂಡಕ್ಟರ್ ಸೀಟ್​ ಮೇಲೆ ಹತ್ತಿ​ ಟಿಕೆಟ್​ ನೀಡಿದ್ದಾರೆ. ಪ್ರಯಾಣಿಕರ ಮದ್ಯೆ ಸಿಲುಕಿದ ಕಂಡಕ್ಟರ್ ಟಿಕೆಟ್​ ನೀಡಲು ಪರದಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪುರುಷ ಮಹಿಳೆಯರ ಮಧ್ಯೆ ವಾಗ್ದಾದ: ಮತ್ತೊಂದೆಡೆ ಸೀಟ್​ಗಾಗಿ ಮಹಿಳೆ ಮತ್ತು ಪುರುಷರ ನಡುವೆ ಗಲಾಟೆ ನಡೆದಿದೆ. ಬಸ್‌ಗಳಲ್ಲಿ ಪುರುಷರಿಗೆ ಶೇ 50ರಷ್ಟು ಸೀಟ್ ಮೀಸಲು ವಿಚಾರವಾಗಿ ಪುರುಷರು ಮಹಿಳೆಯರ ನಡುವೆ ವಾಗ್ವಾದ ನಡೆದಿದೆ. ಸೀಟ್​ಗಾಗಿ ಬಸ್​ನಲ್ಲೆ ಪುರುಷ ಹಾಗೂ ಮಹಿಳಾ ಪ್ರಯಾಣಿಕರು ಕಿತ್ತಾಡಿಕೊಂಡಿದ್ದಾರೆ. ವಿಜಯಪುರದ ಕೇಂದ್ರ ಬಸ್​ನಿಲ್ದಾಣದಿಂದ ಸಿಂದಗಿಗೆ ಹೊರಟಿದ್ದ ಬಸ್​ನಲ್ಲಿ ಗಲಾಟೆ ನಡೆದಿದೆ. ಶೇ. 50 ಸೀಟ್ ಮೀಸಲಿದ್ದರು, ಪುರುಷರಿಗೆ ಸೀಟ್ ಬಿಟ್ಟುಕೊಡ್ತಿಲ್ಲ ಎಂದು ಪ್ರಯಾಣಿಕನೊಬ್ಬ ಗಲಾಟೆ‌ ಮಾಡಿದ್ದಾನೆ. ಮೀಸಲಿ ಸೀಟು ಬಿಟ್ಟುಕೊಡಿ ಎಂದು ಮಹಿಳೆಯೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ.

ಶಕ್ತಿ ಯೋಜನೆ ಮೊದಲ ದಿನ 5 ಲಕ್ಷ 71 ಮಹಿಳೆಯರ ಪ್ರಯಾಣ :ಶಕ್ತಿ ಯೋಜನೆಯಡಿ ಮೊದಲ ದಿನ ಸುಮಾರು 5 ಲಕ್ಷದ 71 ಸಾವಿರಕ್ಕೂ ಹೆಚ್ಚು ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದಾರೆ. ಯೋಜನೆ ಜಾರಿಗೊಂಡ ಬೆನ್ನಲ್ಲೇ ಮಹಿಳೆಯರು ಉಚಿತ ಪ್ರಯಾಣ ಸೌಲಭ್ಯದ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಬಿಎಂಟಿಸಿ, ಕೆಎಸ್ಆರ್​ಟಿಸಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಒಟ್ಟು ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ 1.40 ಕೋಟಿ ರೂ. ಆಗಿದೆ.

ಕೆಎಸ್​ಆರ್​ಟಿಸಿಯಲ್ಲಿ 1,93,83 ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದು, 58.16 ಲಕ್ಷ ರೂ. ವೆಚ್ಚ ತಗುಲಿದೆ. ಬಿಎಂಟಿಸಿಯಲ್ಲಿ 2,01,215 ಮಹಿಳೆಯರು ಪ್ರಯಾಣ ಮಾಡಿದ್ದು, 26.19 ಲಕ್ಷ ರೂ. ವೆಚ್ಚವಾಗಿದೆ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆಯಲ್ಲಿ 53,623 ಮಹಿಳೆಯರು ಪ್ರಯಾಣಿಸಿದ್ದು, 19.70 ಲಕ್ಷ ರೂ. ವೆಚ್ಚ ತಗುಲಿದೆ. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆಯಲ್ಲಿ ಒಟ್ಟು 1,22,354 ಲಕ್ಷ ಮಹಿಳೆಯರು ಪ್ರಯಾಣಿಸಿದ್ದು, 36.16 ಲಕ್ಷ ರೂ. ವೆಚ್ಚವಾಗಿದೆ.

ಎರಡನೇ ದಿನದ ಪ್ರಯಾಣ ಮತ್ತು ವೆಚ್ಚ:ಎರಡನೇ ದಿನಎಲ್ಲಾ ನಾಲ್ಕು ರಸ್ತೆ ಸಾರಿಗೆ ನಿಗಮಗಳಲ್ಲಿ ಒಟ್ಟು, 41,34,726 ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸಿದ್ದರು. ಇದಕ್ಕೆ ಒಟ್ಟು 8.83 ಕೋಟಿ ರೂ. ವೆಚ್ಚ ತಗುಲಿದೆ.

ಕೆಎಸ್​ಆರ್​ಟಿಸಿಯಲ್ಲಿ 11,40,057 ಮಹಿಳೆಯರು ಪ್ರಯಾಣಸಿದ್ದು, 3.57 ಕೋಟಿ ರೂ. ವೆಚ್ಚ ತಗುಲಿದೆ. ಬಿಎಂಟಿಸಿಯಲ್ಲಿ 17,57,887 ಮಹಿಳೆಯರು ಪ್ರಯಾಣಸಿಇದ್ದು, 1.75 ಕೋಟಿ ರೂ. ವೆಚ್ಚ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆಯಲ್ಲಿ 8,31,840 ಮಹಿಳೆಯರು ಪ್ರಯಾಣಿಸಿದ್ದು, 2.10 ಕೋಟಿ ರೂ. ವೆಚ್ಚ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆಯಲ್ಲಿ 4,04,942 ಮಹಿಳೆಯರು ಪ್ರಯಾಣಿಸಿದ್ದು, 1.39 ಕೋಟಿ ವೆಚ್ಚ ವಾಗಿದೆ.

ಇದನ್ನೂ ಓದಿ:Shakti Yojana: ಎರಡನೇ ದಿನವೂ ಶಕ್ತಿ ಬಸ್ ಫುಲ್ ರಶ್; 41.34 ಲಕ್ಷ ಮಹಿಳಾ ಪ್ರಯಾಣಿಕರಿಂದ ಉಚಿತ ಪ್ರಯಾಣ

Last Updated : Jun 14, 2023, 2:05 PM IST

ABOUT THE AUTHOR

...view details