ಕರ್ನಾಟಕ

karnataka

ETV Bharat / state

ನಿಷೇಧದ ನಡುವೆಯೂ ಕಾರ ಹುಣ್ಣಿಮೆ ಆಚರಣೆ; ಎತ್ತು ಓಡಿಸುವ ವೇಳೆ ಪೊಲೀಸ್​ ಜೀಪ್​ ಮೇಲೆ ಕಲ್ಲು ತೂರಾಟ - ಬಬಲೇಶ್ವರ ತಾಲೂಕಿನ ಕಾಖಂಡಕಿ

ಕೊರೊನಾ ವೈರಸ್ ಭೀತಿ ಹಿನ್ನೆಲೆ ಜಿಲ್ಲಾಡಳಿತದ ವತಿಯಿಂದ ಕಾರ ಹುಣ್ಣಿಮೆ ಆಚರಣೆಗೆ ನಿಷೇಧ ಹೇರಲಾಗಿತ್ತು. ನಿಷೇಧ ಇದ್ದರೂ ಸಹ ಸಾವಿರಾರು ಜನ ಸೇರಿ ಪೊಲೀಸರ ಸಮ್ಮುಖದಲ್ಲಿಯೇ ಶೃಂಗಾರಗೊಂಡಿರುವ ಎತ್ತುಗಳನ್ನು ಬೆದರಿಸುವ ಸ್ಪರ್ಧೆ ನಡೆಸಲಾಗಿದೆ.

ಕಾರ ಹುಣ್ಣಿಮೆ
ಕಾರ ಹುಣ್ಣಿಮೆ

By

Published : Jun 11, 2020, 11:58 PM IST

ವಿಜಯಪುರ:ನಿಷೇಧದ ನಡುವೆಯೂ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾಖಂಡಕಿಯಲ್ಲಿ ಕಾರ ಹುಣ್ಣಿಮೆ ಆಚರಣೆ ಮಾಡಿದ್ದಲ್ಲದೇ, ಪೊಲೀಸ್​ ಜೀಪಿನ ಮೇಲೆ ಕುಡುಕರಿಂದ ಕಲ್ಲು ತೂರಾಟ ನಡೆದಿದೆ.

ಕೊರೊನಾ ವೈರಸ್ ಭೀತಿ ಹಿನ್ನೆಲೆ ಜಿಲ್ಲಾಡಳಿತವು ಕಾರ ಹುಣ್ಣಿಮೆ ಆಚರಣೆಗೆ ನಿಷೇಧ ಹೇರಿತ್ತು. ನಿಷೇಧ ಇದ್ದರೂ ಸಹ ಸಾವಿರಾರು ಜನ ಸೇರಿ ಪೊಲೀಸರ ಸಮ್ಮುಖದಲ್ಲಿಯೇ ಎತ್ತುಗಳನ್ನು ಬೆದರಿಸುವ ಸ್ಪರ್ಧೆ ನಡೆಸಲಾಗಿದೆ.

ಎತ್ತುಗಳ ಸ್ಪರ್ಧೆ ವೇಳೆ ಪೊಲೀಸ್​ ಜೀಪ್​ ಮೇಲೆ ಕಲ್ಲು ತೂರಾಟ

ಎತ್ತುಗಳನ್ನು ಬೆದರಿಸಿ ಅವುಗಳನ್ನು ಬರಿಗೈಯಲ್ಲಿ ಹಿಡಿಯುವ ಪ್ರಯತ್ನದಲ್ಲಿ ಹಲವು ಯುವಕರು ಗಾಯಗೊಂಡಿದ್ದಾರೆ. ಈ ವೇಳೆ ಪೊಲೀಸ್​ ಜೀಪಿನ ಮೇಲೆ ಕುಡುಕರು ಕಲ್ಲು ತೂರಾಟ ಮಾಡಿದ್ದಾರೆ. ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ಲಾಠಿ ಬೀಸಿ ಯುವಕರನ್ನು ಓಡಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.

ABOUT THE AUTHOR

...view details