ವಿಜಯಪುರ : ಜೂನ್ 15ರೊಳಗಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಹಾಗಾಗದಿದ್ದರೆ, ಸಚಿವ ಸಿ.ಪಿ.ಯೋಗೇಶ್ವರ ಉಪಮುಖ್ಯಮಂತ್ರಿ ಜತೆಗೆ ಉನ್ನತ ಖಾತೆ ಪಡೆದುಕೊಳ್ಳಲಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಯೋಗೇಶ್ವರ್ ಅವರನ್ನು ಸಂಪುಟದಿಂದ ಕಿತ್ತು ಹಾಕುವ ಧೈರ್ಯ ಬಿಎಸ್ವೈಗೆ ಇಲ್ಲ.
ಯೋಗೇಶ್ವರ್ ಅವರಿಗೆ ಡಿಸಿಎಂ ನೀಡಿ ಅದರ ಜತೆಗೆ ಇಂಧನ ಖಾತೆ ಸಹ ನೀಡಬಹುದು. ಇಲ್ಲವಾದರೆ ಅನಿರ್ವಾಯವಾಗಿ ಯಡಿಯೂರಪ್ಪ ರಾಜೀನಾಮೆ ನೀಡಬೇಕಾಗುತ್ತದೆ ಎಂದು ಭವಿಷ್ಯ ನುಡಿದರು.
ಸಿಪಿವೈರನ್ನ ಸಂಪುಟದಿಂದ ತೆಗೆಯುವ ಧೈರ್ಯ ಬಿಎಸ್ವೈಗೆ ಇಲ್ಲ.. ಆರ್ಎಸ್ಎಸ್ ಬುಲಾವ್ ಬಂದಿಲ್ಲ :ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್) ತಮ್ಮನ್ನು ಕರೆಯಿಸಿಕೊಂಡಿತ್ತು ಎನ್ನುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು. ಅಂಥ ಬುಲಾವು ತಮಗೆ ಬಂದಿರಲಿಲ್ಲ. ಆ ರೀತಿ ಯಾವುದೇ ಬೆಳೆವಣಿಗೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.
ಲಾಕ್‌ಡೌನ್ ಮುಂದುವರೆಸಬೇಡಿ : ಕೊರೊನಾ ರಾಜ್ಯದಲ್ಲಿ ನಿಯಂತ್ರಣದಲ್ಲಿದೆ. ಕೊರೊನಾ ಹಾವಳಿ ಕಡಿಮೆಯಾಗಿದೆ. ಲಾಕ್‌ಡೌನ್ ಹಿಂದಕ್ಕೆ ಪಡೆಯಬೇಕು. ರಾಜಕೀಯಕ್ಕಾಗಿ ಲಾಕ್‌ಡೌನ್ ದುರುಪಯೋಗವಾಗಬಾರದು. ಜೂನ್ 7ರೊಳಗಾಗಿ ಹಂತ ಹಂತವಾಗಿ ಲಾಕ್ಡೌನ್ ಹಿಂದಕ್ಕೆ ಪಡೆಯಬೇಕು ಎಂದು ಸಲಹೆ ನೀಡಿದರು.
ಮಠಾಧೀಶರಿಗೂ ಆಮಿಷ : ಲಿಂಗಾಯತ ಸ್ವಾಮೀಜಿಗಳಿಗೆ ಸಿಎಂ ಪುತ್ರ ವಿಜಯೇಂದ್ರ ಪರ ಚೇಲಾಗಳು ಆಮಿಷ ಒಡ್ಡುತ್ತಿದ್ದಾರೆ. ಬಿಎಸ್ವೈ ಸ್ಥಾನ ಕಳೆದುಕೊಳ್ಳುವ ಭೀತಿ ಎದುರಿಸುತ್ತಿರುವ ಕಾರಣ, ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿ ಎಂದು ಪ್ರಚೋದಿಸುತ್ತಿದ್ದಾರೆ. ಈಗಾಗಲೇ ಹಲವು ಮಠಾಧೀಶರನ್ನು ಭೇಟಿ ಮಾಡಿದ್ದಾರೆ. ಇದರ ಜತೆ ಸಾಮಾಜಿಕ ಜಾಲತಾಣಗಳ ಮೂಲಕ ಮನವಿ ಮಾಡಿದ್ದಾರೆ ಎಂದರು.
ಲಿಂಗಾಯತರ ಮಾನ- ಮರ್ಯಾದೆ ಹಾಳು : ಬಿಎಸ್ವೈ ಕುಟುಂಬದಿಂದ ನಮ್ಮ ಲಿಂಗಾಯತರ ಮಾನ ಮರ್ಯಾದೆ ಹಾಳಾಗಿದೆ. ವೀರಶೈವ ಲಿಂಗಾಯತರಲ್ಲಿ ಒಳ್ಳೆಯ ಮುಖ್ಯಮಂತ್ರಿಗಳಾಗಿದ್ದಾರೆ. ಇವರು ಉತ್ತಮ ಸಿಎಂ ಆಗಿದ್ದರೆ, ನಮ್ಮ ಬೆಂಬಲ ಸದಾ ಇರುತ್ತಿತ್ತು. ಆದರೆ, ಇಡಿೀ ಕುಟುಂಬ ಲೂಟಿಯಲ್ಲಿ ತೊಡಗಿದೆ ಎಂದರು.
ಜಿಂದಾಲ್ ಹಗರಣ :ಜಿಂದಾಲ್ 3666 ಎಕರೆ ಭೂಮಿಯನ್ನು ಒಂದು ಲಕ್ಷ ಇಪ್ಪತೈದು ಸಾವಿರದಂತೆ ಕೊಡುತ್ತಿದ್ದಾರೆ. ಈ ಭೂಮಿ ವಿಚಾರದಲ್ಲಿ ಮೂರುವರೆ ಸಾವಿರ ಸಾವಿರ ಕೋಟಿಯಷ್ಟು ಹಗರಣ ನಡೆದಿದೆ ಎಂದು ಆರೋಪಿಸಿದರು.