ಕರ್ನಾಟಕ

karnataka

ETV Bharat / state

ಪಂಚ ರಾಜ್ಯ ಚುನಾವಣೆ ಬಳಿಕ ಯಡಿಯೂರಪ್ಪ ಬದಲಾವಣೆ ಶತಃಸಿದ್ಧ.. ಯತ್ನಾಳ್ ಭವಿಷ್ಯ - ಸಿಎಂ ಯಡಿಯೂರಪ್ಪ ಬದಲಾವಣೆ

ವಾಜಪೇಯಿ ಹಾಗೂ ಮೋದಿ ಕುಟುಂಬ ರಾಜಕಾರಣ ಮಾಡಿಲ್ಲ. ಹೀಗಾಗಿ, ಅವರ ಹೆಸರು ಹೇಳದೇ ಕುಟುಂಬ ರಾಜಕಾರಣ ಮಾಡುವವರ ಹೆಸರು ಹೇಳಲಾ? ಎನ್ನುವ ಮೂಲಕ ಶಾಸಕ ರೇಣುಕಾಚಾರ್ಯ ಹೇಳಿಕೆಗೆ ಪರೋಕ್ಷವಾಗಿ ಖಡಕ್ ಆಗಿ ಪ್ರತ್ಯುತ್ತರ..

cm-will-change-in-the-state-basavaraj-yatnal
ಬಸನಗೌಡ ಪಾಟೀಲ್ ಯತ್ನಾಳ್

By

Published : Mar 20, 2021, 8:16 PM IST

ವಿಜಯಪುರ :ಪಂಚರಾಜ್ಯಗಳ ಚುನಾವಣೆ ನಂತರ ಕರ್ನಾಟಕದಲ್ಲಿ ಸಿಎಂ ಬದಲಾವಣೆ ಆಗಿಯೇ ಆಗುತ್ತೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಮ್ಮೆ ಸಿಎಂ ಬಿ ಎಸ್ ಯಡಿಯೂರಪ್ಪ ಅವರ ಮೇಲೆ ಕೆಂಡಕಾರಿದರು.

ನಗರದ ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣ ಆವರಣದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕೇಂದ್ರ ನಾಯಕರಿಗೆ ಮನವರಿಕೆಯಾಗಿದೆ. ಮುಂದಿನ ಚುನಾವಣೆಯಲ್ಲಿ ಇದೇ ಸಿಎಂನನ್ನು ಮುಂದಿಟ್ಟುಕೊಂಡು ವಿಧಾನಸಭೆ ಚುನಾವಣೆಗೆ ಹೋಗಲು ಆಗುವುದಿಲ್ಲ. ಇದೇ ಕಾರಣಕ್ಕೆ ಬಿಎಸ್​ವೈ ಬದಲಾವಣೆ ಮಾಡುವುದು ಖಚಿತ ಎಂದು ಹೇಳಿದರು.

ಸಿಎಂ ಬದಲಾವಣೆ ಶತಃಸಿದ್ಧ..

ಸಿಎಂ ಬದಲಾವಣೆ ಪಕ್ಕಾ:ಈಗಾಗಲೇ ಪಂಚರಾಜ್ಯ ಚುನಾವಣೆ ವೇಳೆ ಉತ್ತರಾಖಂಡದಲ್ಲಿ ಯಾವ ರೀತಿ ಸಿಎಂ ಬದಲಾವಣೆಯಾಗಿದೆ. ಅದೇ ರೀತಿ ಪಂಚರಾಜ್ಯ ಚುನಾವಣೆ ನಂತರ ಹರಿಯಾಣ ಹಾಗೂ ಕರ್ನಾಟಕದಲ್ಲಿ ಸಿಎಂ ಬದಲಾವಣೆ ಮಾಡಲಿದ್ದಾರೆ. ಯಾಕೆಂದರೆ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಿಗೆ ಪರಿಸ್ಥಿತಿ ಅರಿವಾಗಿದೆ. ಹೀಗಾಗಿ, ಸಿಎಂ ಬದಲಾವಣೆ ಖಚಿತ ಎಂದರು.

ಕುಟುಂಬ ರಾಜಕಾರಣ ಮಾಡುವವರ ಹೆಸರು ಹೇಳಲಾ? :ಯತ್ನಾಳ್ ಪದೇಪದೆ ವಾಜಪೇಯಿ, ಮೋದಿ ಹೆಸರು ಹೇಳುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ವಾಜಪೇಯಿ ಹಾಗೂ ಮೋದಿ ಕುಟುಂಬ ರಾಜಕಾರಣ ಮಾಡಿಲ್ಲ. ಹೀಗಾಗಿ, ಅವರ ಹೆಸರು ಹೇಳದೇ ಕುಟುಂಬ ರಾಜಕಾರಣ ಮಾಡುವವರ ಹೆಸರು ಹೇಳಲಾ? ಎನ್ನುವ ಮೂಲಕ ಶಾಸಕ ರೇಣುಕಾಚಾರ್ಯ ಹೇಳಿಕೆಗೆ ಪರೋಕ್ಷವಾಗಿ ಖಡಕ್ ಆಗಿ ಪ್ರತ್ಯುತ್ತರ ನೀಡಿದರು.

ಅಧಿಕಾರಕ್ಕೆ ತಂದ ಬಿಜೆಪಿ ಶಾಸಕರನ್ನು ಕಡೆಗಣಿಸಿದ್ದಾರೆ :ಸಿಎಂ ಯಡಿಯೂರಪ್ಪ ಅವರಿಗೆ ಶಾಸಕಾಂಗ ಸಭೆ ಕರೆಯುವ ಇಚ್ಛೆ ಇಲ್ಲ, ಅವರ ಉದ್ದೇಶವೇ ಬೇರೆಯಾಗಿದೆ. ಸಚಿವ ಈಶ್ವರಪ್ಪ ಟಾರ್ಗೆಟ್ ‌ಮಾಡಿ ಬಿಜೆಪಿಯ 38, ಕಾಂಗ್ರೆಸ್ 40 ಹಾಗೂ ಜೆಡಿಎಸ್ ಶಾಸಕರಿಗೆ ಅನುದಾನ‌ ನೀಡಿದ್ದಾರೆ.

ಅವರನ್ನು ಅಧಿಕಾರಕ್ಕೆ ತಂದ ಬಿಜೆಪಿ ಶಾಸಕರನ್ನು ಕಡೆಗಣಿಸಿದ್ದಾರೆ ಎಂದು ಕಿಡಿಕಾರಿದರು. ವಿಜಯಪುರಕ್ಕೆ ಸುಣ್ಣ, ಶಿವಮೊಗ್ಗ ಕ್ಕೆ ಬೆಣ್ಣೆ ನೀಡಿದ್ದಾರೆ. ವಿಮಾನ ನಿಲ್ದಾಣ ಹಾಗೂ ನೀರಾವರಿ ಯೋಜನೆಯಲ್ಲಿ ತಾರತಮ್ಯ ತೋರುತ್ತಿದ್ದಾರೆ ಎಂದರು.

ABOUT THE AUTHOR

...view details