ವಿಜಯಪುರ:ಕರ್ನಾಟಕ-ಮಹಾರಾಷ್ಟ್ರ ಸಹೋದರ ರಾಜ್ಯಗಳು, ನೀರು ಕೊಡುವುದು ತೆಗೆದುಕೊಳ್ಳುವುದು ಸಹಜ ಪ್ರಕ್ರಿಯೆ. ವ್ಯಾಜ್ಯಗಳು ಬಂದಾಗ ಕರ್ನಾಟಕ ತನ್ನ ನಿಲುವುನ ಬದಲಿಸುವುದಿಲ್ಲ. ಚುನಾವಣೆ ಮುಗಿದ ಮೇಲೆ ಸಿಎಂ ಯಡಿಯೂರಪ್ಪ ನೀರು ಹಂಚಿಕೆ ವಿಚಾರವಾಗಿ ಗಮನ ಹರಿಸಬೇಕು ಎಂದು ಶಾಸಕ ಬಸನಗೌಡ ಯತ್ನಾಳ್ ಹೇಳಿದರು.
ಚುನಾವಣೆ ಮುಗಿದ ಮೇಲೆ ನೀರು ಹಂಚಿಕೆ ವಿಚಾರ ಚರ್ಚಿಸಬೇಕು: ಬಸನಗೌಡ ಯತ್ನಾಳ್ ಒತ್ತಾಯ - ಕರ್ನಾಟಕ ಮಹಾರಾಷ್ಟ್ರನೀರು ಹಂಚಿಕೆ ವಿಚಾರದ ಕುರಿತು ಶಾಸಕ ಬಸನಗೌಡ ಯತ್ನಾಳ್ ಹೇಳಿಕೆ
ನೀರು ಹಂಚಿಕೆ ಬಗ್ಗೆ ಕರ್ನಾಟಕ-ಮಹಾರಾಷ್ಟ್ರದ ಮುಖ್ಯಮಂತ್ರಿಗಳು ಪರಸ್ಪರ ಮಾತನಾಡಿ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕಾಗಿದೆ ಎಂದು ಶಾಸಕ ಬಸನಗೌಡ ಯತ್ನಾಳ್ ಒತ್ತಾಯಿಸಿದ್ದಾರೆ.
ಶಾಸಕ ಬಸನಗೌಡ ಯತ್ನಾಳ್
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೀರು ಹಂಚಿಕೆ ವಿಚಾರದಲ್ಲಿ ಗೋವಾ ಮೊಂಡುತನ ಮಾಡುತ್ತದೆ. ಮಹದಾಯಿ ವಿಚಾರವಾಗಿ ಹಿಂದೆಯೂ ಚರ್ಚಿಸಲಾಗಿದೆ. ಮಹಾರಾಷ್ಟ್ರದ ಜತ್ ಭಾಗದಲ್ಲಿ ಕನ್ನಡಿಗರೇ ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ನೀರು ಹಂಚಿಕೆ ಬಗ್ಗೆ ಕರ್ನಾಟಕ-ಮಹಾರಾಷ್ಟ್ರದ ಮುಖ್ಯಮಂತ್ರಿಗಳು ಪರಸ್ಪರ ಮಾತನಾಡಿ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕಾಗಿದೆ ಎಂದರು.
ಕರ್ನಾಟಕಕ್ಕೆ ಅಗತ್ಯವಿದ್ದಾಗ ಈ ಹಿಂದೆ ಮಹಾರಾಷ್ಟ್ರ ಹಣ ಪಡೆಯದೇ ಕೃಷ್ಣಾ, ಭೀಮಾ ನದಿಗೆ ನೀರು ಬಿಟ್ಟಿದೆ. ಸಿಎಂ ಯಡಿಯೂರಪ್ಪ ಮಹದಾಯಿ ವಿವಾದದಲ್ಲಿ ಕೇಂದ್ರ ಸರ್ಕಾರ ಜೊತೆ ಸೇರಿ ಗೋವಾ ಸಿಎಂ ಜೊತೆಗೆ ಚರ್ಚಿಸಬೇಕು ಎಂದರು.