ವಿಜಯಪುರ:ತಮಗೆ ಶಿಷ್ಟಾಚಾರದಂತೆ ಪೊಲೀಸ್ ಗೌರವ ವಂದನೆ ನೀಡಿದ ಎಸ್ಪಿ ಆನಂದ್ ಕುಮಾರ್ ಅವರನ್ನು ಆಲಮಟ್ಟಿ ಹ್ಯಾಲಿಪ್ಯಾಡ್ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಿಸಲು ಬೆಳಗಾವಿಯಿಂದ ಹೆಲಿಕ್ಯಾಪ್ಟರ್ ಮೂಲಕ ಸಿಎಂ ಆಗಮಿಸಿದ್ದರು. ಈ ವೇಳೆ, ಪೊಲೀಸ್ ಶಿಷ್ಟಾಚಾರದಂತೆ ಎಸ್ಪಿ ಆನಂದ್ ಕುಮಾರ್ ಗೌರವ ವಂದನೆ ಸಲ್ಲಿಸಲು ಮುಂದಾಗಿದ್ದರು. ಇದರಿಂದ ಕೋಪಗೊಂಡ ಸಿಎಂ, ಪೊಲೀಸ್ ತಂಡದಿಂದ ಗೌರವ ವಂದನೆ ಆಯೋಜನೆ ಮಾಡಿದ್ದಕ್ಕೆ ಎಸ್ಪಿಗೆ ತರಾಟೆ ತೆಗೆದುಕೊಂಡರು.