ವಿಜಯಪುರ: ಹಳೆ ಮೈಸೂರು ಭಾಗದಲ್ಲಿ ಮುಸ್ಲಿಮರು ಒಕ್ಕಲಿಗರು ಒಂದಾಗುತ್ತಿದ್ದಾರೆ ಎಂದು ಮುಸ್ಲಿಮರನ್ನು ಒಕ್ಕಲಿಗರ ಮೇಲೆ ಎತ್ತಿಕಟ್ಟಲು ಮಾಡಿರುವ ತಂತ್ರವೇ ಉರಿಗೌಡ-ನಂಜೇಗೌಡ ವಿವಾದ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದರು. ಆಲಮಟ್ಟಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘‘ಉರಿಗೌಡ ಮತ್ತು ನಂಜೇಗೌಡ ಒಂದು ಕಾಲ್ಪನಿಕ ಕಥೆ. ಚುನಾವಣೆಯಲ್ಲಿ ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗರು, ಮುಸ್ಲಿಮರು ಒಂದಾಗುತ್ತಿದ್ದಾರೆ. ಮುಸ್ಲಿಮರನ್ನು ಗೌಡರ ಮೇಲೆ ಎತ್ತಿಕಟ್ಟಲು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾಡಿರುವ ಪ್ಲಾನ್ ಇದು’’ ಎಂದು ಟೀಕಿಸಿದರು.
"ನಾನು ಮುಸ್ಲಿಂ ಅನ್ನೋ ಕಾರಣಕ್ಕೆ ಕಾಂಗ್ರೆಸ್ ನನ್ನನ್ನು ಲೀಡರ್ ಮಾಡಲಿಲ್ಲ. ಕೌನ್ಸಿಲ್ನಲ್ಲಿ 25 ಜನರ ಪೈಕಿ 19 ಜನ ನನಗೆ ಸಪೋರ್ಟ್ ಮಾಡಿದ್ದರು. ಆದರೆ ಕಾಂಗ್ರೆಸ್ ನನ್ನನ್ನು ಲೀಡರ್ ಮಾಡಲಿಲ್ಲ" ಎಂದರು. ಜೆಡಿಎಸ್ ಮೂರು ಬಾರಿ ಮುಸ್ಲಿಮರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದೆ. ಕಾಂಗ್ರೆಸ್ ಈ ವರೆಗೂ ಪಕ್ಷದ ಅಧ್ಯಕ್ಷ ಸ್ಥಾನ ಕೊಟ್ಟಿಲ್ಲ ಎಂದು ದೂರಿದರು.
ಇದನ್ನೂ ಓದಿ :ಉರಿಗೌಡ ನಂಜೇಗೌಡರ ಇತಿಹಾಸ ಪಠ್ಯದಲ್ಲಿ ಸೇರಿಸುವ ವಿಚಾರ ಕಮಿಟಿ ನೋಡುತ್ತೆ: ಸಿಎಂ ಬೊಮ್ಮಾಯಿ