ಕರ್ನಾಟಕ

karnataka

ETV Bharat / state

ಯಾರ ಬಳಿ ಗೋಡಾ ಹೈ, ಮೈದಾನ ಹೈ ಅವರು ಮತ್ತೊಮ್ಮೆ ಅಧಿಕಾರಕ್ಕೆ ಬರ್ತಾರೆ.. ಸಿಎಂ ಬೊಮ್ಮಾಯಿ - ವಿಜಯಪುರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ‌ ನೀಡಿದ ಸಿಎಂ ಬೊಮ್ಮಾಯಿ

ವರ್ಷದ 365 ದಿನ ಕೇವಲ ರಾಜಕೀಯ ಮಾಡಿದರೆ, ಜನರ ಸಮಸ್ಯೆಗೆ ಹೇಗೆ ಸ್ಪಂದಿಸಬೇಕು. ಈ ರೀತಿಯ ಆಲೋಚನೆ ನನಗೆ ಬಂದಿದೆ. ಅದನ್ನು ನನ್ನಿಂದಲೇ ಆರಂಭವಾಗಲಿ, ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುವುದು ನಮ್ಮ ಕರ್ತವ್ಯ..

ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ‌ ನೀಡಿದ ಸಿಎಂ ಬೊಮ್ಮಾಯಿ
ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ‌ ನೀಡಿದ ಸಿಎಂ ಬೊಮ್ಮಾಯಿ

By

Published : Dec 25, 2021, 6:42 PM IST

ವಿಜಯಪುರ : ರಾಜ್ಯದ ಜನತೆ ನಮಗೆ ಐದು ವರ್ಷದ ಕಾಲಾವಧಿ ನೀಡಿರುತ್ತಾರೆ.‌ ಅಂದರೆ 60 ತಿಂಗಳು ಇರುತ್ತದೆ. ಅದರಲ್ಲಿ 59 ತಿಂಗಳು ಜನರಿಗಾಗಿ ದುಡಿಯೋಣ, ಒಂದು ತಿಂಗಳು ರಾಜಕೀಯ ಮಾಡೋಣ, ಯಾರ ಬಳಿ ಗೋಡಾ ಹೈ, ಮೈದಾನ ಹೈ ಅವರು ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ‌ ನೀಡಿದ ಸಿಎಂ ಬೊಮ್ಮಾಯಿ

ನಗರದ ಜಿಲ್ಲಾ ಪಂಚಾಯತ್‌ ಕಚೇರಿ ಬಳಿಯ ಮೈದಾನದಲ್ಲಿ ಮಿನಿ ವಿಧಾನಸೌಧಕ್ಕೆ ಶಂಕು ಸ್ಥಾಪನೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ‌ ನೀಡಿ ಮಾತನಾಡಿದರು.‌ 59 ತಿಂಗಳು ಜನರ ಸೇವೆ ಮಾಡೋಣ, ಉಳಿದ ಒಂದು ತಿಂಗಳು ರಾಜಕೀಯ ಮಾಡೋಣ. ಜನರ ಒಲವು ಯಾರ ಕಡೆ ಇದೆ ಎನ್ನುವುದು ತಿಳಿಯುತ್ತದೆ.

ವರ್ಷದ 365 ದಿನ ಕೇವಲ ರಾಜಕೀಯ ಮಾಡಿದರೆ, ಜನರ ಸಮಸ್ಯೆಗೆ ಹೇಗೆ ಸ್ಪಂದಿಸಬೇಕು. ಈ ರೀತಿಯ ಆಲೋಚನೆ ನನಗೆ ಬಂದಿದೆ. ಅದನ್ನು ನನ್ನಿಂದಲೇ ಆರಂಭವಾಗಲಿ, ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುವುದು ನಮ್ಮ ಕರ್ತವ್ಯ ಎಂದರು.

ಜಿಲ್ಲೆಯನ್ನು ಸಂಪೂರ್ಣ ನೀರಾವರಿಗೆ ಅಳವಡಿಸಬೇಕು. ಇದಕ್ಕೆ ಆಲಮಟ್ಟಿ ಜಲಾಶಯ 529.60 ಮೀಟರ್ ಬದಲಿಗೆ 524ಮೀಟರ್‌ಗೆ ಎತ್ತರಿಸಬೇಕಾಗಿದೆ. ಇದಕ್ಕೆ ಮುಳುಗಡೆ ಆಗುವ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳಬೇಕು. ಆಗ ಮಾತ್ರ ಜಿಲ್ಲೆ ಸಂಪೂರ್ಣ ನೀರಾವರಿಗೆ ಒಳಪಡಲಿದೆ ಎಂದರು.

ವಿಮಾನ ನಿಲ್ದಾಣ ಕಾಮಗಾರಿಗೆ ಹೆಚ್ಚುವರಿ ಹಣ :ನಗರದ ಹೊರವಲಯದ ಬುರಣಾಪುರದಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣ ಕಾಮಗಾರಿಗೆ ಹೆಚ್ಚುವರಿಯಾಗಿ 120 ಕೋಟಿ ಹಣ ಬಿಡುಗಡೆ ಮಾಡಲಾಗುವುದು. ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಮೌಖಿಕವಾಗಿ ಸೂಚನೆ ನೀಡಿದರು.

For All Latest Updates

TAGGED:

ABOUT THE AUTHOR

...view details