ವಿಜಯಪುರ:ಲಾಲ್ ಬಹದ್ದೂರ್ ಶಾಸ್ತ್ರಿ ಮಾರುಕಟ್ಟೆಯ ರಸ್ತೆ ಬದಿಯ ವ್ಯಾಪಾರಸ್ಥರ ಅಂಗಡಿ ಮುಂಗಟ್ಟುಗಳನ್ನು ತರೆವುಗೊಳಿಸಿರುವುದನ್ನು ಖಂಡಿಸಿ ನ.26ರಂದು ಸ್ವಯಂ ಘೋಷಿತ ಬಂದ್ ಆಚರಣೆಗೆ ತರಕಾರಿ ವ್ಯಾಪಾರಿಗಳ ಸಂಘದ ಸದಸ್ಯರು ಮುಂದಾಗಿದ್ದಾರೆ.
ರಸ್ತೆ ಬದಿಯ ಅಂಗಡಿ ಮುಗ್ಗಟ್ಟುಗಳ ತೆರವು ಹಿನ್ನೆಲೆ.. ನ.26ಕ್ಕೆ ಸ್ವಯಂ ಘೋಷಿತ ಬಂದ್
ನಗರದಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ಮಾರುಕಟ್ಟೆಯ ವ್ಯಾಪಾರಸ್ಥರ ಅಂಗಡಿ ಮುಂಗ್ಗಟ್ಟುಗಳನ್ನು ತೆರವಿಗೆ ಜಿಲ್ಲಾಡಳಿತ ಮುಂದಾಗಿದ್ದು, ಇದನ್ನು ಖಂಡಿಸಿ ವ್ಯಾಪಾಸ್ಥರು ನ. 26ಕ್ಕೆ ಸ್ವಯಂ ಬಂದ್ ಆಚರಣೆಗೆ ಮುಂದಾಗಿದ್ದಾರೆ.
ಇಂದು ನಗರದಲ್ಲಿ ಸಭೆ ನಡೆಸಿ ಸದಸ್ಯರು ಈ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ. ಕಳೆದ 40 ವರ್ಷಗಳಿಂದ ರಸ್ತೆ ಬದಿಯಲ್ಲಿ ಹಣ್ಣು,ತರಕಾರಿ ವ್ಯಾಪಾರ ನಂಬಿಕೊಂಡು ಜೀವನ ಸಾಗಿಸಿಕೊಂಡು ಬಂದಿದ್ದಾರೆ. ಜಿಲ್ಲಾಡಳಿತ ಅಭಿವೃದ್ಧಿ ಕಾಮಗಾರಿ ಹೆಸರಿನಲ್ಲಿ ರಸ್ತೆ ಬದಿಯ ವ್ಯಾಪಾರಿಗಳ ಅಂಗಡಿ ಮುಂಗಟ್ಟು ತೆರವುಗೊಳಿಸಿದ ನಡೆ ಸರಿಯಲ್ಲ. ಜಿಲ್ಲಾಡಳಿತ ಕ್ರಮದಿಂದ 350ಕ್ಕೂ ಕುಟುಂಬಗಳ ಬೀದಿಗೆ ಬಂದಿದ್ದು, ಜಿಲ್ಲಾಡಳಿತ ಕ್ರಮದ ವಿರುದ್ಧ ನ.26 ರಂದು ರಸ್ತೆ ಬದಿಯ ವ್ಯಾಪಾರಿಗಳು ತಮ್ಮ ಅಂಗಡಿ ಮುಂಗಟ್ಟು ಬಂದ್ ಮಾಡಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದರು.
ಲಾಲ್ ಬಹದ್ದೂರ್ ಶಾಸ್ತ್ರಿ ಮಾರುಕಟ್ಟೆ ತರಕಾರಿ ಹಾಗೂ ಹಣ್ಣು ವ್ಯಾಪಾರಿ ಮಹಿಳೆಯರು ಅಂಗಡಿ ತೆರವುನಿಂದ ಕಂಗಾಲಾಗಿದ್ದು, ಜಿಲ್ಲಾಡಳಿತದ ವಿರುದ್ಧ ಆಕ್ರೊಶ ಹೊರ ಹಾಕಿದರು.