ಕರ್ನಾಟಕ

karnataka

ETV Bharat / state

ವಿಜಯಪುರ ನಗರ ಪ್ರದೇಶದಲ್ಲಿ ಲಾಕ್​ಡೌನ್ ತೆರವುಗೊಳಿಸಿ: ಡಿಸಿಗೆ ಬಸನಗೌಡ ಪಾಟೀಲ ಪತ್ರ - ಲಾಕ್​ಡೌನ್ ತೆರವುಗೊಳಿಸಿ

ಕೊವಿಡ್-19 ವಿಚಾರವಾಗಿ ಲಾಕ್​ಡೌನ್ ತೆರೆವುಗೊಳಿಸುವ ಅಧಿಕಾರವನ್ನು ಪ್ರಧಾನಮಂತ್ರಿಗಳು ಆಯಾ ಜಿಲ್ಲಾಡಳಿತ ಮುಖ್ಯಸ್ಥರಿಗೆ ವಹಿಸಿದ್ದು, ಇದರ ವಿಶೇಷ ಅಧಿಕಾರ ಬಳಿಸಿಕೊಂಡು ಲಾಕ್​ಡೌನ್ ತೆರವುಗೊಳಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

Clear Lockdown in Vijayapur Urban Area:Basanagouda Patil Letter to DC
ಪಾಟೀಲ ಪತ್ರ

By

Published : Jun 4, 2021, 10:51 PM IST

ವಿಜಯಪುರ:ನಗರದಲ್ಲಿ ಕೊರೊನಾ ಪ್ರಕರಣಗಳು ಕಡಿಮೆಯಾಗಿರುವ ಕಾರಣ ಲಾಕ್​ಡೌನ್ ತೆರವುಗೊಳಿಸಬೇಕೆಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.

ಕೊವಿಡ್-19 ವಿಚಾರವಾಗಿ ಲಾಕ್​ಡೌನ್ ತೆರೆವುಗೊಳಿಸುವ ಅಧಿಕಾರವನ್ನು ಪ್ರಧಾನಮಂತ್ರಿಗಳು ಆಯಾ ಜಿಲ್ಲಾಡಳಿತ ಮುಖ್ಯಸ್ಥರಿಗೆ ವಹಿಸಿದ್ದು, ಇದರ ವಿಶೇಷ ಅಧಿಕಾರ ಬಳಿಸಿಕೊಂಡು ಲಾಕ್​ಡೌನ್ ತೆರವುಗೊಳಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಡಿಸಿಗೆ ಬಸನಗೌಡ ಪಾಟೀಲ ಪತ್ರ

ನಿತ್ಯ ಬೆಳಗ್ಗೆ 10ಗಂಟೆಯಿಂದ ನಗರದಲ್ಲಿ ಲಾಕ್​ಡೌನ್ ಜಾರಿಯಾಗಿರುವ ಕಾರಣ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿರುವ ಕಾರಣ ರೈತರು ಪಟ್ಟಣ ಪ್ರದೇಶದಿಂದ ಗೊಬ್ಬರ, ಬೀಜ, ಕೃಷಿ ಉಪಕರಣ ಖರೀದಿಗೆ ಬರಲು ತೊಂದರೆಯಾಗುತ್ತಿದೆ. ಅವರ ಜೊತೆ‌ ನಿತ್ಯ ವ್ಯಾಪಾರದಿಂದ ಜೀವನ ಸಾಗಿಸುವ ಕುಟುಂಬಗಳಿಗೆ ಕಷ್ಟಕರವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ABOUT THE AUTHOR

...view details